ಸಾಧ್ವಿ ಪಾಟೀಲ ಪ್ರಥಮ ಪಲ್ಲವ

Published on

ಹುಬ್ಬಳ್ಳಿ: ನಗರದ ಕಲಾ ಸುಜಯ ಭಾರತೀಯ ಶಾಸ್ತ್ರೀಯ ಕಲಾ ದೇಗುಲದ ವತಿಯಿಂದ ತಮ್ಮ ಶಿಷ್ಯೆ ಸಾಧ್ವಿ ಪಾಟೀಲ ಅವರ ಪ್ರಥಮ ಪಲ್ಲವ ಸಮಾರಂಭವನ್ನು ಜುಲೈ 28ರಂದು ಸಂಜೆ 5.30ಕ್ಕೆ ದೇಶಪಾಂಡೆನಗರದ ಸವಾಯಿ ಗಂಧರ್ವ ಹಾಲ್ ನಲ್ಲಿ ಏರ್ಪಡಿಸಲಾಗಿದೆ ಎಂದು ಗುರು ವಿದ್ವಾನ್ ಹಾಗೂ ಕಾರ್ಯಕ್ರಮ ಸಂಯೋಜಕ ಸುಜಯ ಶಾನಭಾಗ ತಿಳಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 9 ವರ್ಷದ ಸಾಧ್ವಿ ಪಾಟೀಲ ಅವರು ಕನ್ನಡ ಸಾಹಿತ್ಯ ಆಧಾರವಾಗಿ ಇಟ್ಟುಕೊಂಡು ಶಾಸ್ತ್ರೀಯ ಚೌಕಟ್ಟಿನಲ್ಲಿ ಸುಮಾರು ಒಂದು ಗಂಟೆ ನೃತ್ಯ ಪ್ರದರ್ಶನ ನೀಡಲಿದ್ದಾರೆ.

ದಾರ್ಶನಿಕರು ಹಾಗೂ ಕವಿಗಳಾದ ಪುರಂದರದಾಸರು, ಅಕ್ಕಮಹಾದೇವಿ, ಕುವೆಂಪು, ದ.ರಾ. ಬೇಂದ್ರೆ ಅವರ ರಚನೆಗಳಿಗೆ ವಿದ್ಯಾಥಿರ್ನಿ ನೃತ್ಯ ಮಾಡಲಿದ್ದಾರೆ. ಸಾಧ್ವಿ ಕಳೆದ 6 ವರ್ಷದಿಂದ ನಮ್ಮ ಸಂಸ್ಥೆಯಲ್ಲಿ ನೃತ್ಯ ಕಲಿಯುತ್ತಿದ್ದಾರೆ ಎಂದರು.

ಮಾತಾ ಆಶ್ರಮದ ಮಾತಾ ತೇಜೋಮಯಿ ಅವರು ಕಾರ್ಯಕ್ರಮ ಉದ್ಘಾಟಿಸುವರು. ಅತಿಥಿಗಳಾಗಿ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಶ್ರೀಧರ ಚಕ್ರವರ್ತಿ, ಪ್ರಕಾಶಕ ಎಂ.ಎ. ಸುಬ್ರಹ್ಮಣ್ಯ, ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ, ಭರತನಾಟ್ಯ ಕಲಾವಿದೆ ವಿದ್ಯಾರಾಣಿ ಎಂ.ಪಿ. ಹಾಗೂ ಖ್ಯಾತ ಅಂಕಣಕಾರ ರೋಹಿತ ಚಕ್ರತಿರ್ಥ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಸಂಸ್ಥೆಯ ಟ್ರಸ್ಟಿ ಜೈವಂತ, ಕಿರಣರಾಮ ಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net