ಬೆಂಕಿ ಮಹದೇವು ಸಮಾಧಿಗೆ ಪ್ರತಿಧ್ವನಿ ಪ್ರಸಾದ್ ಪುಷ್ಪನಮನ

Oplus_131072
ಕೆ.ಆರ್.ಬ್ಯಾಂಕ್ ಚುನಾವಣೆಯಲ್ಲಿ ವಿಜೇತರಾದ ಕರ್ನಾಟಕ ಪ್ರತಿಧ್ವನಿ ವೇದಿಕೆ ಪ್ರಸಾದ್ ಅವರು ನಂಜನಗೂಡಿನಲ್ಲಿರುವ ಬೆಂಕಿ ಮಹಾದೇವು ಅವರ ಸಮಾಧಿಗೆ ತೆರಳಿ ಪುಷ್ಪ ನಮನ ಸಲ್ಲಿಸಿದರು. ತ್ರಿನೇಶ್, ಆನಂದ್, ದೇವರಾಜು, ಮಂಗಳಾ ಪ್ರಕಾಶ್, ವಾಸು, ಲೋಕೇಶ್, ಎಲ್‌ಐಸಿ ಮಹದೇವಸ್ವಾಮಿ ಸೇರಿದಂತೆ ಮತ್ತು ಇತರರು ಇದ್ದರು.
Published on

ಕೆಆರ್ ಬ್ಯಾಂಕ್ ಚುನಾವಣೆಯಲ್ಲಿ ಗೆಲುವು ಹಿನ್ನೆಲೆ

ನಂಜನಗೂಡು: ಮೈಸೂರಿನ ಕೃಷ್ಣರಾಜೇಂದ್ರ ಬ್ಯಾಂಕ್‌ನ ಚುನಾವಣೆಯಲ್ಲಿ ಸತತವಾಗಿ ಐದನೇ ಬಾರಿ ಗೆಲುವು ಪಡೆದ ಕರ್ನಾಟಕ ಪ್ರತಿಧ್ವನಿ ವೇದಿಕೆ ರಾಜ್ಯಾಧ್ಯಕ್ಷ ಪ್ರಸಾದ್ ಅವರು ನಂಜನಗೂಡು ಸಮೀಪದಲ್ಲಿರುವ ಗಾಂಧಿ ಗ್ರಾಮದ ಬೆಂಕಿ ಮಹದೇವು ಅವರ ಸಮಾಧಿಗೆ ಪೂಜೆ ಸಲ್ಲಿಸಿ ಪುಷ್ಪ ನಮನ ಸಲ್ಲಿಸಿದರು.

ಬೆಂಕಿ ಮಹದೇವು ಅವರ ಅಭಿಮಾನಿಯಾಗಿರುವ ಪ್ರತಿಧ್ವನಿ ಪ್ರಸಾದ್ ಮೊದಲು ನಂಜನಗೂಡಿನಲ್ಲಿರುವ ಬೆಂಕಿ ಮಹದೇವು ಮನೆಗೆ ತೆರಳಿ ಮಹದೇವು ಅವರ ಪತ್ನಿಯ ಆಶೀರ್ವಾದ ಪಡೆದು, ಬಳಿಕ ಸಮಾಧಿ ಸ್ಥಳಕ್ಕೆ ತೆರಳಿ ಪುಷ್ಪ ನಮನ ಸಲ್ಲಿಸಿದರು. ಹಿರಿಯ ಮುತ್ಸದ್ಧಿ, ನೇರ, ನಿಷ್ಠುರವಾದಿ ಬೆಂಕಿ ಮಹಾದೇವು ಅವರು ಸಾವಿರಾರು ಯುವಕರಿಗೆ ಮಾರ್ಗದರ್ಶನ ನೀಡಿದ್ದರು. ಇವರ ಆಶೀರ್ವಾದದೊಂದಿಗೆ ಕರ್ನಾಟಕ ಪ್ರತಿಧ್ವನಿ ವೇದಿಕೆ ಪ್ರಾರಂಭಗೊಂಡಿತು. ಇವರ ಅಭಿಮಾನಿಯಾಗಿ ನಾನು ಇಂದು ಐದನೇ ಬಾರಿ ಚುನಾವಣೆಯಲ್ಲಿ ಗೆದ್ದು ಬಂದಿದ್ದೇನೆ ಎಂದರು.

ಮೈಸೂರು ಜಿಲ್ಲಾಧ್ಯಕ್ಷ ತ್ರಿನೇಶ್ ಮಾತನಾಡಿ, ರಾಜ್ಯಾಧ್ಯಕ್ಷ ಪ್ರಸಾದ್ ಅವರು ಕೆ.ಆರ್. ಬ್ಯಾಂಕ್ ಚುನಾವಣೆಯಲ್ಲಿ ಅಭೂತಪೂರ್ವ ಯಶಸ್ಸು ಸಾಧಿಸಿದ್ದಾರೆ. ಧೀಮಂತ ನಾಯಕ ಮಹಾದೇವು ಅವರನ್ನು ಪ್ರಸಾದ್ ಅವರು ಸದಾ ಪೂಜಿಸುತ್ತಿದ್ದು, ಪ್ರಸಾದ್ ಅವರಿಗೆ ಇನ್ನು ಹೆಚ್ಚಿನ ಅಧಿಕಾರ ಸಿಗಲಿ ಆಶಿಸಿದರು.

ಪ್ರತಿಧ್ವನಿ ವೇದಿಕೆ ನಗರ ಅಧ್ಯಕ್ಷ ಆನಂದ್, ನಗರಸಭಾ ಉಪಾಧ್ಯಕ್ಷ ದೇವರಾಜು, ಮಂಗಳಾ ಪ್ರಕಾಶ್, ವಾಸು, ಲೋಕೇಶ್, ಎಲ್‌ಐಸಿ ಮಹದೇವಸ್ವಾಮಿ, ಗೌಡಿಕೆ ಪುಟ್ಟಸಿದ್ದಪ್ಪ, ದೇವೇಗೌಡನಪುರ ಪ್ರಕಾಶ್, ರೇಚಣ್ಣ ಮಂಜು, ರಾಜಶೇಖರ್, ಕೇಬಲ್ ಅರುಣ್, ದೇವರು ಮಹಾದೇವ ಸೇರದಂತೆ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net