

ಮೈಸೂರು: ಶಾಸಕ ತನ್ವೀರ್ ಸೇಠ್ ಸಾಬ್ರು, ಎಚ್. ವಿಶ್ವನಾಥ್ ಏನಾಗಿದ್ದಾರೆ ಎಂಬ ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿರುಗೇಟು ನೀಡಿದರು.
ನಾನು ಚೆನ್ನಾಗಿದ್ದೇನೆ, ನಿನಗೆ ಏನು ರೋಗ ಬಂದಿದೆ? ಧರ್ಮ, ಜಾತಿ ಸೇರಿದಂತೆ ಯಾವ್ಯಾವ ರೋಗ ಅಂಟಿಸಿಕೊಂಡು ಕೂತಿದ್ದೀಯಾ? ನಾನು ರಾಜಕೀಯ ಪಕ್ಷಗಳ ತತ್ವ ಸಿದ್ಧಾಂತದ ಬಗ್ಗೆ ಮಾತನಾಡುವುದಿಲ್ಲ. ಎಲ್ಲ ಪಕ್ಷಗಳ ಸಿದ್ಧಾಂತಗಳು ಸರಿಯಾಗಿದೆ. ಆದರೆ,ಅದನ್ನು ನಡೆಸುವವರ ನಡವಳಿಕೆ ಮತ್ತು ಮನಸ್ಥಿತಿ ಸರಿಯಿಲ್ಲ ಎಂದು ಹೇಳಿದರು.