

ಮೈಸೂರು : ಮಾಜಿ ಸಂಸದ ಪ್ರತಾಪ್ ಸಿಂಹ ಅವರಿಗೆ ಸಂಬಂಧಿಸಿದ್ದ ವಿಡಿಯೋ 2019ರ ಲೋಕಸಭಾ ಚುನಾವಣೆಯಲ್ಲಿ ಹರಿದಾಡಿತ್ತು. ಈ ವಿಡಿಯೋಗೆ ಪ್ರತಾಪ್ ಸಿಂಹ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದು, ತಾಕತ್ತಿದ್ದರೆ ತಡೆಯಾಜ್ಞೆ ತೆರವುಗೊಳಿಸಲಿ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಸವಾಲು ಹಾಕಿದ್ದಾರೆ.
ನನಗೆ ತಂದೆ ತಾಯಿ, ಸಮಾಜ ಹಾಗೂ ನನ್ನ ಪಕ್ಷ ಸಂಸ್ಕಾರ, ಸಂಸ್ಕೃತಿ ಕಲಿಸಿದೆ. ನಿನಗೆ ಸಂಸ್ಕಾರ ಇದ್ದರೆ, ಸ್ವಾಭಿಮಾನ, ಆತ್ಮಗೌರವ ಇದ್ದರೆ ತಡೆಯಾಜ್ಞೆ ತೆರವುಗೊಳಿಸು. ಯಾವುದೇ ವಿಚಾರವಾದರೂ ಸರಿ ನೇರವಾಗಿ ಚರ್ಚೆ ಮಾಡೋಣ. ಒಂದೇ ವೇದಿಕೆಯಲ್ಲಿ ಮಾತನಾಡೋಣ. ನಾನು ಯಾರಿಗಾದರೂ ಮೋಸ, ಹೆಣ್ಣು ಮಕ್ಕಳಿಗೆ ಅನ್ಯಾಯ ಮಾಡಿದ್ದರೆ ದಾಖಲೆ ಸಮೇತ ಬಿಡುಗಡೆ ಮಾಡಲಿ ಎಂದು ಸವಲು ಹಾಕಿದರು.
ನಿಮ್ಮ ಮೇಲೆ ಬಂದಿರುವ ಆರೋಪಗಳ ಬಗ್ಗೆ ತಡೆಯಾಜ್ಞೆ ತೆರವು ಮಾಡಿಸಿದರೆ ಧಾರಾವಾಹಿಯಂತೆ ದಿನಕ್ಕೊಂದು ವಿಡಿಯೋ ಬಿಡುಗಡೆ ಮಾಡಲಾಗುವುದು. ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡುವಾಗ ನೂರು ಕೋಟಿ ರೂಪಾಯಿ ಲಂಚ ಪಡೆದಿದ್ದೀಯ. ವಿಜಯನಗರದಲ್ಲಿ ಆರು ಕೋಟಿ ರೂ. ವೆಚ್ಚದಲ್ಲಿ ಮನೆ ಕಟ್ಟಿಸಿದ್ದೀಯ. ರಾಜಕೀಯ ಮಾಡುವುದಾದರೇ ನೇರವಾಗಿ ಮಾಡು ಸವಾಲು ಎದುರಿಸುವೆ ಎಂದರು.