ಎಂ. ಪ್ರಶಾಂತ್ ಶೇಟ್‌ಗೆ ಬಿಸಿನೆಸ್ ಎಕ್ಸೆಲೆನ್ಸ್ ಪ್ರಶಸ್ತಿ

mng-3dec-prashanth shet
Published on


ಮಂಗಳೂರು : ಸಾರಸ್ವತ ಉದ್ಯಮಿಗಳ ಜಾಗತಿಕ ಚೇಂಬರ್ ಹಾಗೂ ಮಾಹೆ ಬೆಂಗಳೂರಿನ ಸಹಯೋಗದಲ್ಲಿ ಮಾಹೆ ಬೆಂಗಳೂರು ಕ್ಯಾಂಪಸ್‌ನ ಡಾ. ರಾಮದಾಸ ಪೈ ಕನ್ವೆನ್ಷನ್ ಹಾಲ್‌ನಲ್ಲಿ ಇತ್ತೀಚಿಗೆ ಜರಗಿದ ಎಂಎಸ್‌ಎಂಇ ಮತ್ತು ಸ್ಟಾರ್ಟ್ ಅಪ್ ಕಾನ್‌ಕ್ಲೇವ್ ಸಮಾರಂಭದಲ್ಲಿ ಮಂಗಳೂರಿನ ಯುವ ಉದ್ಯಮಿ, ಎಸ್.ಎಲ್.ಶೇಟ್ ಜುವೆಲ್ಲೆರ್ಸ್ ಅಂಡ್ ಡೈಮಂಡ್ ಹೌಸ್ ಸಂಸ್ಥೆಯ ಪಾಲುದಾರ ಎಂ. ಪ್ರಶಾಂತ್ ಶೇಟ್ ಇವರಿಗೆ ಅತ್ಯುತ್ತಮ ಉದ್ಯಮಶೀಲತೆ ಮತ್ತು ಆರ್ಥಿಕ ಬೆಳವಣಿಗೆಗೆ ಬಿಸಿನೆಸ್ ಎಕ್ಸೆಲೆನ್ಸ್ ಪ್ರಶಸ್ತಿ ಪ್ರದಾನ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net