ಕಡೂರಹಳ್ಳಿ ಸಹಕಾರ ಸಂಘಕ್ಕೆ ಪ್ರಶಾಂತ್ ಅಧ್ಯಕ್ಷ

26KDR1
ಕಡೂರಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಡಿ.ಪ್ರಶಾಂತ್ ಅವರಿಗೆ ನಿರ್ದೇಶಕರು ಅಭಿನಂದಿಸಿದರು
Published on

ಕಡೂರು: ತಾಲೂಕಿನ ಕಡೂರಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಡಿ. ಪ್ರಶಾಂತ್ ಸೋಮವಾರ ಅವಿರೋಧವಾಗಿ ಆಯ್ಕೆಯಾದರು.
ಈ ಹಿಂದಿನ ಅಧ್ಯಕ್ಷ ಕೃಷ್ಣಮೂರ್ತಿ ರಾಜೀನಾಮೆಯಿಂದ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣಾಣೆಯಲ್ಲಿ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ಸಹಕಾರ ಸಂಘದ ಅಭಿವೃದ್ಧಿ ಅಧಿಕಾರಿ ಅನುಪಮಾ ಡಿ.ಪ್ರಶಾಂತ್ ಅವರ ಅವಿರೋಧ ಆಯ್ಕೆ ಘೋಷಿಸಿದರು.
ಅಭಿನಂದನಾ ಸಭೆಯಲ್ಲಿ ನೂತನ ಅಧ್ಯಕ್ಷ ಡಿ.ಪ್ರಶಾಂತ್ ಮಾತನಾಡಿ, ಗ್ರಾಮೀಣ ಪ್ರದೇಶಗಳು ಅಭಿವ್ದೃಧಿಯಾಗಲು ಸಹಕಾರ ಸಂಘಗಳ ಪಾತ್ರ ಮಹತ್ವದ್ದಾಗಿದೆ. ಸಂಘದ ಷೇರುದಾರರ ಸಹಕಾರ ಮತ್ತು ಆಡಳಿತ ಮಂಡಳಿ ನಿರ್ದೇಶಕರ ಸೂಕ್ತ ಸಲಹೆ ಮತ್ತು ಮಾರ್ಗದರ್ಶನದೊಂದಿಗೆ ಸಂಘದ ಬೆಳವಣಿಗೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ ಎಂದರು.
ಸಂಘದ ಮಾಜಿ ಅಧ್ಯಕ್ಷ ಜಿಗಣೇಹಳ್ಳಿ ನೀಲಕಂಠಪ್ಪ ಮಾತನಾಡಿ, ಆಡಳಿತ ಮಂಡಳಿ ಸಹಕಾರದೊಂದಿಗೆ ಸಂಘ ಅಭಿವೃದ್ಧಿಯಾಗುತ್ತದೆ. ಈ ಹಿಂದೆ ತಮ್ಮ ಅಧ್ಯಕ್ಷ ಸ್ಥಾನದ ಅವಧಿಯಲ್ಲಿ ಗೋದಾಮು ನಿರ್ಮಿಸಲಾಗಿದೆ. ಅಭಿವೃದ್ಧಿ ವಿಚಾರದಲ್ಲಿ ಆಡಳಿತದ ಮಂಡಳಿ ಪ್ರೋತ್ಸಾಹ ಹೆಚ್ಚಿನದಾಗಿರುತ್ತದೆ. ನೂತನ ಅಧ್ಯಕ್ಷರು ಎಲ್ಲರ ವಿಶ್ವಾಸದೊಂದಿಗೆ ಸಂಘದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಹೇಳಿದರು.
ಸಂಘದ ಉಪಾಧ್ಯಕ್ಷ ರುದ್ರಪ್ಪ, ನಿರ್ದೇಶಕರಾದ ಬಳ್ಳೇಕೆರೆ ವಿಶ್ವನಾಥ್, ಈಶ್ವರಪ್ಪ, ರಾಜಪ್ಪ, ತೇಜರಾಜ್, ದ್ರಾಕ್ಷಯಣಮ್ಮ, ನಿರ್ಮಲ, ರಂಗಪ್ಪ, ವ್ಯವಸ್ಥಾಪಕ ಗಂಗಾಧರ್‌ನಾಯ್ಕ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net