ಪ್ರಶಾಂತ್ ಪತ್ತೆಗೆ ಮನವಿ

prashanth-d
Published on

ಕೆ.ಆರ್.ಸಾಗರ: ಸಮೀಪದ ಮೊಗರಹಳ್ಳಿ ಗ್ರಾಮದ ನಿವಾಸಿ ಎನ್.ದೇವರಾಜು ಎಂಬುವರ ಪುತ್ರ ಡಿ.ಪ್ರಶಾಂತ್(19) ನಾಪತ್ತೆಯಾಗಿರುವ ಬಗ್ಗೆ ಕೆ.ಆರ್.ಸಾಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಮಾ.15ರಂದು ಸಂಜೆ ಮೈಸೂರಿನ ಮೇಟಗಳ್ಳಿಗೆ ಹೋಗಿ ಬರುವುದಾಗಿ ಮನೆಯಿಂದ ಹೋದವನು ಈವರೆಗೂ ತಿರುಗಿ ಬಂದಿಲ್ಲ ಎಂದು ಆತನ ತಂದೆ ದೂರಿನಲ್ಲಿ ತಿಳಿಸಿದ್ದಾರೆ.

ಚಹರೆ: ಸುಮಾರು 5.6 ಅಡಿ ಎತ್ತರವಿದ್ದು, ಕಪ್ಪು ಮೈ ಬಣ್ಣ, ಸಾಧಾರಣ ಮೈ ಕಟ್ಟು ಹೊಂದಿದ್ದಾನೆ. ಮನೆಯಿಂದ ಹೋರ ಹೋಗುವಾಗ ಬೂದಿ ಬಣ್ಣದ ಜರ್ಕಿನ್, ಸಿಮೆಂಟ್ ಕಲರ್ ಜೀನ್ಸ್ ಪ್ಯಾಂಟ್ ಧರಿಸಿದ್ದನು. ಈತ ಕನ್ನಡ, ತೆಲುಗು ಭಾಷೆಯನ್ನು ಬಲ್ಲವನಾಗಿದ್ದು, ಮಾಹಿತಿ ಸಿಕ್ಕರೆ ಕೆ.ಆರ್.ಸಾಗರ ಪೊಲೀಸ್ ಠಾಣೆ ದೂ. 08236-257233 ಅಥವಾ 9480804856 ಸಂಪರ್ಕಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net