

ಮಡಿಕೇರಿ: ಮಡಿಕೇರಿ ಹೊಸ ಬಡಾವಣೆಯ ಪ್ರಸನ್ನ ಗಣಪತಿ ದೇವಾಲಯದ ೨೨ನೇ ವಾರ್ಷಿಕೋತ್ಸವ ಗುರುವಾರ ವಿಜ್ರಂಭಣೆಯಿಂದ ಜರುಗಿತು.
ಇಂದು ಬೆಳಿಗ್ಗೆ ೭ ಗಂಟೆಯಿಂದ ಪ್ರಸನ್ನ ಗಣಪತಿಗೆ ಎಳನೀರು ಅಭಿಷೇಕ, ಪಂಚಾಮೃತ ಅಭಿಷೇಕ, ಕ್ಷೀರಾಭಿಷೇಕ ಮತ್ತು ಅಲಂಕಾರ ಪೂಜೆ ನೆರವೇರಿತು. ನಂತರ ಮಹಾಗಣಪತಿ ಹೋಮ ಹಾಗೂ ನವ ಕಲಶ ಪೂಜೆ, ಮಧ್ಯಾಹ್ನ ಮಹಾಮಂಗಳಾರತಿ ಹಾಗೂ ಅನ್ನಸಂತರ್ಪಣೆ ನೆರವೇರವೇರಿತು. ನೂರಕ್ಕೂ ಅಧಿಕ ಭಕ್ತಾದಿಗಳು ಪಾಲ್ಗೊಂಡಿದ್ದರು.
ಸಂಜೆ ಸತ್ಯನಾರಾಯಣ ಪೂಜೆ, ರಂಗಪೂಜೆ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು.