

ಯಲಬುರ್ಗಾ: ಇತ್ತೀಚೆಗೆ ರಾಯಚೂರಿನಲ್ಲಿ ದಲಿತ ಮುಖಂಡ ಪ್ರಸಾದನನ್ನು ಹತ್ಯೆ ಮಾಡಿರುವ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿ ರಾಜ್ಯ ದಲಿತ ಸಂಘಟನೆಗಳ ತಾಲೂಕು ಒಕ್ಕೂಟದಿಂದ ಗ್ರೇಡ್2 ತಹಸೀಲ್ದಾರ್ ನಾಗಪ್ಪ ಸಜ್ಜನ್‌ಗೆ ಸೋಮವಾರ ಮನವಿ ಸಲ್ಲಿಸಲಾಯಿತು.
ದಲಿತ ಸಂಘಟನೆಗಳ ಪದಾಧಿಕಾರಿಗಳಾದ ಬಸವರಾಜ ನಡುಲಮನಿ, ಪುಟ್ಟರಾಜ ಪೂಜಾರ, ಶಿವಾನಂದ ಬಣಕಾರ ಮಾತನಾಡಿ, ದಲಿತ ಮುಖಂಡ ಪ್ರಸಾದನನ್ನು ಕೊಲೆ ಮಾಡಿದ 12 ಆರೋಪಿಗಳ ಪೈಕಿ ನಾಲ್ವರನ್ನು ಬಂಧಿಸಿದ್ದು ಇನ್ನೂ 8 ಜನರನ್ನು ಕೂಡಲೇ ಬಂಧಿಸಿ ಕಠಿಣ ಕಾನೂನು ಶಿಕ್ಷೆಗೆ ಒಳಪಡಿಸಬೇಕು.
ಪ್ರಸಾದ ಕುಟುಂಬಕ್ಕೆ ಸರ್ಕಾರದಿಂದ ಸೂಕ್ತ ಪರಿಹಾರ ಹಾಗೂ ಸೌಲಭ್ಯ ಒದಗಿಸಬೇಕು ಎಂದು ಆಗ್ರಹಿಸಿದರು. ದಲಿತ ಸಂಘಟನೆಗಳ ಪದಾಧಿಕಾರಿಗಳಾದ ಸುರೇಶ ನಡುಲಮನಿ, ದುರಗಪ್ಪ ಕಡೇಮನಿ, ನಾಗರಾಜ ಯಡಿಯಾಪುರ, ಯಮನೂರಪ್ಪ ಲಕಮನಗುಳೆ, ಹನುಮಂತಪ್ಪ ಹೊಸಳ್ಳಿ ಇತರರಿದ್ದರು.