

ಹುಬ್ಬಳ್ಳಿ : ಮಹಾಶಿವರಾತ್ರಿ ಅಂಗವಾಗಿ ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಮಠಕ್ಕೆ ಬರುವ ಭಕ್ತರಿಗೆ ಹಳೇ ಹುಬ್ಬಳ್ಳಿ ಶ್ರೀ ವೀರಭದ್ರೇಶ್ವರ ದೇವಸ್ಥಾನ ಟ್ರಸ್ಟ್ ಕಮಿಟಿ ವತಿಯಿಂದ ಮಹಾಪ್ರಸಾದ ವಿತರಿಸುವ ಕಾರ್ಯಕ್ಕೆ ಇಂಚಲ ಮಠದ ಶ್ರೀ ಶಿವಾನಂದ ಭಾರತಿ ಸ್ವಾಮೀಜಿ ಬುಧವಾರ ಶ್ರೀಮಠದ ಆವರಣದಲ್ಲಿ ಚಾಲನೆ ನೀಡಿದರು.
ಬುಧವಾರದ ಪ್ರಸಾದದಲ್ಲಿ 22 ಸಾವಿರ ಗುಲಾಬ್ ಜಾಮೂನು, 25 ಸಾವಿರ ಚಿಕ್ಕು ಹಣ್ಣು, 175 ಚುರುಮರಿ ಚೀಲದ ಸುಸಲಾ, 300 ಕೆಜಿ ಕಡಲೆಹಿಟ್ಟಿನ ಮಿರ್ಚಿಗಳನ್ನು ಬೆಳಗ್ಗೆ 11 ಗಂಟೆಯಿಂದ ತಡರಾತ್ರಿಯವರೆಗೆ ವಿತರಿಸಲಾಯಿತು.
ಗುರುವಾರದ ಪ್ರಸಾದದಲ್ಲಿ ಬೆಳಗಿನ ಉಪಾಹಾರಕ್ಕೆ ಸೆಟ್ ದೋಸೆ, ಸಾಂಬಾರ, ಮಧ್ಯಾಹ್ನ ಊಟದ ಪ್ರಸಾದಕ್ಕೆ ಗೋಧಿ ಹುಗ್ಗಿ, ಅನ್ನ ಮತ್ತು ಸಾಂಬಾರ, ಬದನೆಕಾಯಿ ಪಲ್ಲೆಯನ್ನು ವಿತರಿಸಲಾಗುವುದು. ಪ್ರಸಾದ ವಿತರಣೆ ಕಾರ್ಯದಲ್ಲಿ ಶ್ರೀ ವೀರಭದ್ರೇಶ್ವರ ಟ್ರಸ್ಟ್ ಕಮಿಟಿ ಪದಾಧಿಕಾರಿಗಳು ಹಾಗೂ ಭಕ್ತರು ಪಾಲ್ಗೊಂಡಿದ್ದರು.