1,500ಕ್ಕೂ ಹೆಚ್ಚು ಮಕ್ಕಳಿಂದ ಪ್ರಾಣಾಯಾಮ

HUN-JUNE-21-4(SHASTRI SCHOOL PROGRAMME)
ಹುಣಸೂರು ನಗರದ ಶಾಸ್ತ್ರಿ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಿದ್ದ ವಿಶ್ವ ಯೋಗದಿನಾಚರಣೆ ಸಮಾರಂಭದಲ್ಲಿ ವಿದ್ಯಾರ್ಥಿಗಳು ವಿವಿಧ ಯೋಗಾಸನ ಪ್ರದರ್ಶಿಸಿದರು. ಉಪವಿಭಾಗಾಧಿಕಾರಿ ಎಚ್.ಬಿ.ವಿಜಯಕುಮಾರ್, ಕಾರ್ಯದರ್ಶಿ ರಾಧಾಕೃಷ್ಣ, ನಿರ್ದೇಶಕ ಸಚ್ಚಿತ್, ಪ್ರಾಂಶುಪಾಲ ರವಿಶಂಕರ್ ಇದ್ದರು.
Published on

ಹುಣಸೂರು: ನಗರದ ಶಾಸ್ತ್ರಿ ವಿದ್ಯಾಸಂಸ್ಥೆಯಲ್ಲಿ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ 1,500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಾಮೂಹಿಕ ಯೋಗ ಪ್ರದರ್ಶನದ ಮೂಲಕ ಯೋಗದ ಮಹತ್ವ ಸಾರಿದರು.

ಶನಿವಾರ ಬೆಳಗ್ಗೆ 7 ಗಂಟೆಯಿಂದ 9ರವರೆಗೆ ಆಯೋಜಿಸಿದ್ದ ಯೋಗ ಪ್ರದರ್ಶನದಲ್ಲಿ ಶಿಸ್ತಿನಿಂದ ವಿದ್ಯಾರ್ಥಿಗಳು ಯೋಗಗುರುಗಳ ನಿರ್ದೇಶನದಂತೆ ಪ್ರಾಣಾಯಾಮ, ತಾಡಾಸನ, ವೃಕ್ಷಾಸನ, ತ್ರಿಕೋನಾಸನ ಮತ್ತು ಮಕರಾಸನ ಮುಂತಾದ ಆಸನಗಳನ್ನು ಪ್ರದರ್ಶಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಹುಣಸೂರು ಉಪವಿಭಾಗಾಧಿಕಾರಿ ಎಚ್.ಬಿ.ವಿಜಯಕುಮಾ ಮಾತನಾಡಿ, ನಾವೆಲ್ಲರೂ ಆರೋಗ್ಯದಿಂದ ಇರಲು ಯೋಗಾಭ್ಯಾಸ ಬಹುಮುಖ್ಯ. ಆರೋಗ್ಯ ಸ್ವಸ್ಥವಾಗಿರಲು ನಿತ್ಯ ಯೋಗಾಭ್ಯಾಸ ಮಾಡುವುದು ಅಗತ್ಯ ಎಂದು ತಿಳಿಸಿದರು.

ಸಂಸ್ಥೆಯ ಕಾರ್ಯದರ್ಶಿ ರಾಧಾಕೃಷ್ಣ ಮಾತನಾಡಿ, ಯೋಗಾಭ್ಯಾಸವು ವ್ಯಕ್ತಿತ್ವದ ವಿವಿಧ ಆಯಾಮಗಳನ್ನು ವಿಕಸಗೊಳಿಸುತ್ತದೆ ಹಾಗೂ ಸದೃಢ ದೇಹ, ಮಾನಸಿಕ ಶಾಂತಿ ನೆಮ್ಮದಿಗೆ ಯೋಗ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಶಿಕ್ಷಣ ಸಂಯೋಜಕ ಡಾ.ಗುರುಮೂರ್ತಿ, ಸಹ ನಿರ್ದೇಶಕ ಸಚ್ಚಿತ್, ಪ್ರಾಂಶುಪಾಲ ರವಿಶಂಕರ್, ಶಿಕ್ಷಕರು ಮತ್ತು ಪಾಲಕರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net