ಮುಂದಿನ ಬಾರಿ ಆರ್ಯ ಈಡಿಗ ಸಮಾಜದವರೇ ಸಿಎಂ: ಶ್ರೀ ಪ್ರಣವಾನಂದ ಸ್ವಾಮೀಜಿ ಭವಿಷ್ಯ

14 SMG- PRANAVANADA SHREE
Published on

ಶಿವಮೊಗ್ಗ: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಆರ್ಯ ಈಡಿಗ ಸಮುದಾಯದವರೇ ರಾಜ್ಯದ ಮುಖ್ಯಮಂತ್ರಿ ಆಗುತ್ತಾರೆ ಎಂದು ರಾಣೆಬೆನ್ನೂರಿನ ಶ್ರೀ ಶರಣಬಸವೇಶ್ವರ ಮಠದ ಶ್ರೀ ಪ್ರಣವಾನಂದ ಸ್ವಾಮೀಜಿ ಭವಿಷ್ಯ ನುಡಿದರು.

ರಾಜ್ಯದಲ್ಲಿ ಈಡಿಗ ಸಮುದಾಯಕ್ಕೆ ಸೇರಿದ ಏಳು ಶಾಸಕರಿದ್ದರೂ ಕೋಟ ಶ್ರೀನಿವಾಸ ಪೂಜಾರಿಗೆ ಮಾತ್ರ ಸಚಿವ ಸ್ಥಾನ ನೀಡಲಾಗಿದೆ. ನಮ್ಮ ಸಮುದಾಯದ ಶಾಸಕರಿಗೆ ಉಪಮುಖ್ಯಮಂತ್ರಿ ಆಗುವ ಎಲ್ಲ ಅರ್ಹತೆಗಳಿವೆ. ಆದರೂ ರಾಜ್ಯ ಸರ್ಕಾರ ಸಮಾಜವನ್ನು ಕಡೆಗಣಿಸಿದೆ. ಆಗಿರುವ ಅನ್ಯಾಯ ಸರಿಪಡಿಸದಿದ್ದರೆ ಮುಂಬರುವ ಜಿಪಂ ಮತ್ತು ತಾಪಂ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.

ಮಸ್ಕಿ ಉಪಚುನಾವಣೆ ವೇಳೆ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಬ್ರಹ್ಮಶ್ರೀ ನಿಗಮ ಮಂಡಳಿ ಸ್ಥಾಪಿಸುವ ಭರವಸೆ ನೀಡಿದ್ದರು. ಆದರೆ ಉಪಚುನಾವಣೆ ಬಳಿಕ ಕೊಟ್ಟ ಮಾತು ಮರೆತಿದ್ದಾರೆ. ಆರ್ಯ ಈಡಿಗ ಸಮಾಜ 85 ಲಕ್ಷ ಜನಸಂಖ್ಯೆ ಹೊಂದಿದ್ದು ಆರ್ಥಿಕ, ರಾಜಕೀಯ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿದೆ. ಹಾಗಾಗಿ ಸಮಾಜದ ಅಭಿವೃದ್ಧಿಗೆ ಆರ್ಯ ಈಡಿಗ ಬ್ರಹ್ಮಶ್ರೀ ನಿಗಮ ಮಂಡಳಿ ರಚಿಸಬೇಕು. ಸಿಎಂ ಬಗ್ಗೆ ಗೌರವ ಮತ್ತು ನಂಬಿಕೆ ಇದ್ದು ಬ್ರಹ್ಮಶ್ರೀ ನಿಗಮ-ಮಂಡಳಿ ಮಾಡುವ ವಿಶ್ವಾಸವಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net