

ಮೈಸೂರು: ಮೈಸೂರು ರಾಜಮನೆತನದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಬಿರುಸಿನ ಮತಯಾಚನೆಯಲ್ಲಿ ತೊಡಗಿದ್ದು, ಮತ್ತೊಂದೆಡೆ ಯದುವೀರ್ ಅವರ ತಾಯಿ ಪ್ರಮೋದಾದೇವಿ ಒಡೆಯರ್ ಮೊಮ್ಮಗ ಆದ್ಯವೀರ್ ಜತೆಗೆ ಬುಧವಾರ ಮೃಗಾಲಯದಲ್ಲಿ ಜಾಲಿಮೂಡ್‌ನಲ್ಲಿ ಕಂಡುಬಂದರು.
ಮೊಮ್ಮಗನೊಂದಿಗೆ ಮೃಗಾಲಯಕ್ಕೆ ಭೇಟಿ ನೀಡಿದ ಪ್ರಮೋದಾದೇವಿ ಒಡೆಯರ್ ಮೃಗಾಲಯದಲ್ಲಿ ಒಂದು ಸುತ್ತು ಹಾಕಿ ಮೊಮ್ಮಗನಿಗೆ ಪ್ರಾಣಿ, ಪಕ್ಷಿಗಳನ್ನು ತೋರಿಸಿ ಸಂಭ್ರಮಿಸಿದರು. ಇದೇ ಸಂದರ್ಭ ಒಡೆಯರ್ ಅವರನ್ನು ಸಿನಿಮಾ ನಟಿ ಮೇಘನಾ ರಾಜ್ ಕುಟುಂಬ ಭೇಟಿಯಾಗಿ ಮಾತುಕತೆ ನಡೆಸಿದರು.