ಹಿಂದುಗಳನ್ನು ಕೆರಳಿಸಿ ಡಿಸೆಂಬರ್ 6ರ ಘಟನೆ ಮರುಕಳಿಸುವಂತೆ ಮಾಡಬೇಡಿ : ಪ್ರಮೋದ್ ಮುತಾಲಿಕ್ ಎಚ್ಚರಿಕೆ

Pramod Muthalik
Published on

ಮೈಸೂರು: ವಾರಣಾಸಿಯ ಜ್ಞಾನವಾಪಿ ಮಸೀದಿ ವಿಚಾರವಾಗಿ ದೇಶದ ಮುಸ್ಲಿಮರು ಸೌಜನ್ಯದಿಂದ ನಡೆದುಕೊಳ್ಳಬೇಕು, ಇದು ಕಾಶಿ ವಿಶ್ವನಾಥ ದೇಗುಲವಾಗಿದ್ದು, ಕೂಡಲೇ ದೇಗುಲವನ್ನು ಹಿಂದುಗಳಿಗೆ ಬಿಟ್ಟುಕೊಡಬೇಕು ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಆಗ್ರಹಿಸಿದರು.

ನಗರದಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಜ್ಞಾನವಾಪಿ ಮಸೀದಿ ವಿಚಾರವಾಗಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರಿಯಾಗಿ ಹೇಳಿದ್ದಾರೆ. ಮಸೀದಿಯೊಳಗೆ ತ್ರಿಶೂಲ ಬರಲು ಹೇಗೆ ಸಾಧ್ಯ ಎಂಬ ಅವರ ಪ್ರಶ್ನೆ ಸರಿಯಾಗಿದೆ. ಅದು ಮಸೀದಿಯಲ್ಲಿ ದೇಗುಲ ಎಂಬುದಕ್ಕೆ ಪುರಾವೆಗಳು ಇವೆ ಎಂದರು.

ವಿವಾದಿತ ಜ್ಞಾನವಾಪಿ ಮಸೀದಿಯನ್ನು ಕೂಡಲೇ ಹಿಂದುಗಳಿಗೆ ಬಿಟ್ಟುಕೊಡಲು ಕ್ರಮ ವಹಿಸಬೇಕು. ಮುಸ್ಲಿಮರು ಹಿಂದುಗಳನ್ನು ಕೆರಳಿಸುವ ಕೆಲಸ ಮಾಡಬಾರದು. ಹಿಂದುಗಳನ್ನು ಕೆರಳಿಸಿ ಡಿಸೆಂಬರ್ 6ರ ಘಟನೆ ಮರುಕಳಿಸುವಂತೆ ಮಾಡಬೇಡಿ. ಮುಸ್ಲಿಂ ಸಂಘಟನೆಗಳು ಹದ್ದುಮೀರಿ ವರ್ತಿಸುತ್ತಿವೆ, ದೇಶದ ಮುಸ್ಲಿಮರು ಆಕ್ರಮಣಕಾರಿ ಔರಂಗಜೇಬನನ್ನು ಅನುಕರಿಸುವುದು ಸರಿಯಲ್ಲ ಎಂದು ಹೇಳಿದರು.

ಪ್ರಪಂಚದಲ್ಲಿ ಎಲ್ಲಾದರೂ ಜ್ಞಾನವಾಪಿ ಹೆಸರಿನ ಮಸೀದಿ ಇದೆಯಾ? ಅಲ್ಲಿನ ಬಸವ ಸಂಪೂರ್ಣ ಮಸೀದಿ ಕಡೆಗೆ ಮುಖ ಮಾಡಿದೆ. ಅದು ದೇವಸ್ಥಾನ ಎನ್ನಲು ಸಾಕಷ್ಟು ದಾಖಲೆಗಳಿವೆ. ಹೀಗಾಗಿ ಮುಸ್ಲಿಮರು ಸೌಜನ್ಯದಿಂದ ಬಿಟ್ಟು ಕೊಡಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net