ಬಿಜೆಪಿಯವರು ಎಸ್‌ಡಿಪಿಐ ಹಾಗೂ ಪಿಎಫ್‌ಐ ಬ್ಯಾನ್‌ ಮಾಡಲ್ಲ: ಕಾರಣ ಬಿಚ್ಚಿಟ್ಟ ಮುತಾಲಿಕ್

19KWR-Pramod Mutalik
Published on

ದಾವಣಗೆರೆ: ಕಾಂಗ್ರೆಸ್ ಪಕ್ಷದವರು, ಕೇರಳ ಸಿಎಂ ಪಿಣರಾಯ್‌ ಬ್ಯಾನ್‌ ಮಾಡಲು ಆಗ್ರಹಿಸಿದ್ದಾರೆ. ಆದ್ರೂ ಬಿಜೆಪಿಯವರು ಎಸ್‌ಡಿಪಿಐ ಹಾಗೂ ಪಿಎಫ್‌ಐ ಸಂಘಟನೆ ಬ್ಯಾನ್‌ ಮಾಡಲ್ಲ ಎಂದು ರಾಜ್ಯ ಸರ್ಕಾರದ ವಿರುದ್ದ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್‌ ಮುತಾಲಿಕ್ ಕಿಡಿಕಾರಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ರಾಜಕೀಯ ಲಾಭಕ್ಕಾಗಿ ಈ ಸಂಘಟನೆಗಳನ್ನು ಬಿಜೆಪಿ ಬೆಳೆಸುತ್ತಿದೆ. ಎಸ್‌ಡಿಪಿಐ ಸಂಘಟನೆ ಮುಸ್ಲಿಂ ಓಟ್‌ ಬ್ಯಾಂಕ್‌ ಒಡೆಯುತ್ತಿದ್ದಾರೆ. ಇದರಿಂದ ಬಿಜೆಪಿಗೆ ರಾಜಕೀಯವಾಗಿ ಲಾಭ ಆಗುತ್ತೆ, ರಾಜಕೀಯ ಲಾಭಕ್ಕಾಗಿ ಬಿಜೆಪಿ ಪಕ್ಷ ರಾಕ್ಷಸರನ್ನು ಬೆಳೆಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಕಾಲಿ ದಳ ಒಡೆಯಲು ದಿವಂಗತ ಪ್ರಧಾನಿ ಇಂದಿರಾಗಾಂಧಿ ಖಲಿಸ್ಥಾನ ಮೂಮೆಂಟ್‌ ಬೆಳೆಸಿದರು. ಮುಂದೇ ಅದೇ ಸಂಘಟನೆಯ ಬಿಂದ್ರನ್‌ವಾಲೆಯಿಂದ ಇಂದಿರಾಗಾಂಧಿ ಹತರಾದರು. ಆದೇ ರೀತಿ ಬಿಜೆಪಿಯವರು ಹಾಗೂ ದೇಶ ತಾವೇ ಬೆಳೆಸಿದ ರಾಕ್ಷಸನಿಗೆ ಬಲಿಯಾಗಲಿದೆ. ಅದನ್ನು ಬಯಲು ಮಾಡಲು ಮುಂದಿನ ತಿಂಗಳು ರಾಜ್ಯ ವ್ಯಾಪ್ತಿ ಎಸ್‌ಡಿಪಿಐ, ಪಿಎಫ್‌ಐ ಬ್ಯಾನ್‌ ಮಾಡುವಂತೆ ಪ್ರತಿಭಟನೆ ಮಾಡುತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net