ಬೆಂಗಳೂರು ಬಾಂಬ್ ಸ್ಫೋಟದ ಮೂಲ ಸೆಂಟ್ರಲ್ ಜೈಲ್ ನಲ್ಲಿದೆ-ಮುತಾಲಿಕ್

Pramod mutalik
Published on

ಕಾರವಾರ: ಬಾಂಬ್ ಸ್ಪೋಟ ಪ್ರಕರಣವನ್ನು ರಾಜಕೀಯ ಪಕ್ಷಗಳು ರಾಜಕೀಯ ನಾಯಕರು ಗಂಭೀರವಾಗಿ ತೆಗೆದುಕೊಳ್ಳಬೇಕು. ರಾಜಕಾರಣ ಮಾಡಬಾರದು ಎಂದು ಶ್ರೀ ರಾಮ ಸೇನೆಯ ಅಧ್ಯಕ್ಷ ಪ್ರಮೋದ ಮುತಾಲಿಕ ಸಲಹೆ ನೀಡಿದರು.

ಬೆಂಗಳೂರು ರಾಮೇಶ್ವರಂ ಕೆಫೆ ಸ್ಪೋಟ ಸಂಬಂಧ ಕಾರವಾರದಲ್ಲಿ ಮಾಧ್ಯಮದ ಪ್ರತಿನಿಧಿಗಳ ಜತೆ ಮಾತನಾಡಿದರು.

ಆಡಳಿತ ಪಕ್ಷದವರಿರಬಹುದು, ವಿರೋಧ ಪಕ್ಷದವರಿರಬಹುದು ಒಂದೊಂದು ಹೇಳಿಕೆಗಳನ್ನು ಕೊಡುವುದರಿಂದ ತನಿಖೆಯ ದಾರಿ ತಪ್ಪುತ್ತಾ ಹೋಗುತ್ತದೆ. ಪ್ರಕರಣದ ಮೂಲ ಬೇರು ಸಿಗದೇ ಮತ್ತೆ, ಮತ್ತೆ ಅಂಥ ಘಟನೆಯಾಗುತ್ತಿರುವುದನ್ನು ನೋಡಿದ್ದೇವೆ. ರಾಮೇಶ್ವರಂ ಕೆಫೆಯ ಬಾಂದ್ ಸ್ಪೋಟ ಮೊದಲನೇಯದಲ್ಲ. ಕೊನೆಯದೂ ಅಲ್ಲ. ರಾಜಕೀಯ ಪಕ್ಷಗಳ ನಿರ್ಲಕ್ಷ್ಯದಿಂದಲೇ ಮತ್ತೆ, ಮತ್ತೆ ಘಟನೆಗಳು ನಡೆಯುತ್ತಿವೆ ಎಂದು ಆರೋಪಿಸಿದರು.

ರಾಜ್ಯದ ಪೊಲೀಸರು ಭಯೋತ್ಪಾದಕ ಶಕ್ತಿಗಳನ್ನು ಬಗ್ಗು ಬಡಿಯಲು ಶಕ್ತರಿದ್ದಾರೆ. ಆದರೆ, ಇಲ್ಲಿಯ ಪೊಲೀಸ್ ಇಲಾಖೆಯ ಮೇಲೆ ಆಡಳಿತ ಪಕ್ಷದವರು ಒತ್ತಡ ತರುತ್ತಾರೆ. ದಿಕ್ಕು ತಪ್ಪಿಸುತ್ತಾರೆ. ಅಲ್ಲದೇ, ಘಟನೆಯ ಸಂಪರ್ಕ ಹೈದ್ರಾಬಾದ್ ಸೇರಿ ಹೊರ ರಾಜ್ಯಗಳಿಗೂ ಹೋಗುತ್ತಿರುವುದರಿಂದ ಪ್ರಕರಣವನ್ನು ಎನ್ ಐಎಗೆ ವಹಿಸುವುದು ಸೂಕ್ತ ಎಂದರು.

ಸೆಂಟ್ರಲ್ ಜೈಲು ಭಯೋತ್ಪಾದನಾ ಕೇಂದ್ರ

ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಭಯೋತ್ಪಾದನೆಯ ಕೇಂದ್ರವಾಗಿದೆ. ಆ ನಿಟ್ಟಿನಲ್ಲಿ ತನಿಖೆ ನಡೆಯಬೇಕು ಎಂದು ಪ್ರಮೋದ ಮುತಾಲಿಕ ಸಲಹೆ ನೀಡಿದರು.ಅಕ್ರಮ ಗೋ ಸಾಗಾಟ ಮಾಡುವುದನ್ನು ತಡೆದ ದೊಡ್ಡಬಳ್ಳಾಪುರದ ಶ್ರೀ ರಾಮ ಸೇನೆ ಕಾರ್ಯಕರ್ತರನ್ನು ಸರ್ಕಾರ ಬಂಧಿಸಿ ಕೇಂದ್ರ ಕಾರಾಗೃಹದಲ್ಲಿ ಇರಿಸಿತ್ತು. ಕಾರ್ಯಕರ್ತು ಜೈಲಿನ ಚಟುವಟಿಕೆಗಳ ಬಗ್ಗೆ ವಿಸ್ತ್ರತ ವರದಿ ನೀಡಿದ್ದಾರೆ. ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟದ ಆರೋಪಿ ನಾಸಿರ್ ಅಲ್ಲಿಯೇ ಇದ್ದಾನೆ. ಇನ್ನೂ ಐದಾರು ಜನ ಭಯೋತ್ಪಾದಕರು ಅಲ್ಲಿದ್ದಾರೆ. ಒಬ್ಬೊಬ್ಬರ ಬಳಿ ಐದಾರು ಮೊಬೈಲ್ ಹಳಿವೆ. ಅವರು ಎಲ್ಲಿ ಬೇಕಾದರೂ ಲಂಚ ಕೊಟ್ಟು ಓಡಾಡಬಹುದಾಗಿದೆ. ಈ ನಿಟ್ಟಿನಲ್ಲಿ ತನಿಖೆ ನಡೆಯಬೇಕು ಎಂದರು.

ಗುಂಡು ಹಾರಿಸಿ

ವಿಧಾನ ಸೌಧದಲ್ಲೇ ಪಾಕಿಸ್ತಾನದ ಪರ ಘೋಷಣೆ ಕೂಗಿದವರನ್ನು ಬಂಧಿಸಿ, ವಿಚಾರಣೆ ಮಾಡಿ ಪ್ರಯೋಜನವಿಲ್ಲ. ಗುಂಡು ಹಾರಿಸಬೇಕು ಎಂದು ಶ್ರೀ ರಾಮ ಸೇನೆ ಅಧ್ಯಕ್ಷ ಪ್ರಮೋದ ಮುತಾಲಿಕ ಹೇಳಿದರು.

ದೇಶದ್ರೋಹ ಎಂಬುದು ವೈರಸ್, ಕ್ಯಾನ್ಸರ್ ಇದ್ದಂತೆ‌. ಆಳುವ ಪಕ್ಷ‌ ಮುಸ್ಲೀಂ ಮತ ಬ್ಯಾಂಕ್ ನ ಸಲುವಾಗಿ ಮುಸ್ಲೀಂ ತುಷ್ಟೀಕರಣಕ್ಕಾಗಿ ಪ್ರಕರಣದ ದಾರಿ ತಪ್ಪಿಸುತ್ತಿದೆ.
24 ಗಂಟೆಯಲ್ಲಿ ಕರ್ನಾಟಕ ಪೊಲೀಸರು ಆರೋಪಿಗಳನ್ನು ಹಿಡಿದಿದ್ದಾರೆ. ಆದರೆ, ಆಳುವ ಪಕ್ಷ ಅವರ ಕೈ ಕಟ್ಟುತ್ತಿದೆ. ಬಾಯಿ ಮುಚ್ಚಿಸುತ್ತಿದೆ.
ರಾಜ್ಯಸಭಾ ಸದಸ್ಯ ರಾಝಿರ್ ಅವರೇ ಅಯೋಗ್ಯ ಹೇಳಿಕೆ ನೀಡುತ್ತಿದ್ದಾರೆ. ಅವರ ಮೇಲೆಯೇ ಮೊದಲ ಪ್ರಕರಣ ದಾಖಲಿಸಬೇಕು.
ದೇಶದ್ರೋಹದ ಕ್ಯಾನ್ಸರ್ ಗೆ ಚಿಕಿತ್ಸೆ ನೀಡಿ ಗುಣಪಡಿಸಲು ಸಾಧ್ಯವಿಲ್ಲ. ರೋಗ ಕಾಣಿಸಿಕೊಂಡ ಭಾಗವನ್ನು ಕತ್ತರಿಸಿ ಬಿಸಾಕಬೇಕು.ಅದೇ ರೀತಿ ಈ ದೇಶದ ಅನ್ನ ತಿಂದು, ಎಲ್ಲ ಸೌಲಭ್ಯ ಪಡೆದು ದೇಶ ದ್ರೋಹದ ಘೋಷಣೆ ಕೂಗುವವರನ್ನು ಜೈಲಿಗೆ ಹಾಕಬಾರದು ಗುಂಡು ಹಾರಿಸಿ ಸಾಯಿಸಬೇಕು ಎಂದರು.

ಎಂಪಿಗಳು ನಿವೃತ್ತಿ ಪಡೆಯಲಿ

ರಾಜ್ಯದ ಬಿಜೆಪಿಯ ಕೆಲವು ಎಂಪಿಗಳು ಸ್ವಯಂ ನಿವೃತ್ತಿ ಪಡೆಯಲಿ ಎಂಬುದು ನನ್ನ ಸಲಹೆ ಎಂದ ಪ್ರಮೋದ ಮುತಾಲಿಕ ಹೇಳಿದರು.‌

ಉತ್ತರ ಕನ್ನಡದಿಂದ ಗೋವಾಕ್ಕರ ಗೋ ಮಾಂಸ ಸಾಗಣೆ ನಡೆಯುತ್ತಿದೆ.ಯಲ್ಲಾಪುರ, ಹಳಿಯಾಳ ಭಾಗದಲ್ಲಿ ಮತಾಂತರ ನಡೆಯುತ್ತಿದೆ. ಅದನ್ನು ತಡೆಯಲು ಸಂಸದ, ಶಾಸಕರು ವಿಫಲರಾಗಿದ್ದಾರೆ. ಭಟ್ಕಳದ ಭಯೋತ್ಪಾದನೆಯ ಕುರಿತು ವಿವರ ಇರುವ ಜಗನ್ನಾಥ ಶೆಟ್ಟಿ ವರದಿಯನ್ನು ಬಹಿರಂಗ ಮಾಡುವಲ್ಲಿ ಬಿಜೆಪಿ ಸರ್ಕಾರ ಸಹ ವಿಫಲವಾಗಿದೆ ಎಂದು ಆರೋಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net