ಆರ್‌ಎಸ್‌ಎಸ್ ಒಂದು ಆನೆ ಇದ್ದ ಹಾಗೆ

pramod-muthalik
Published on

ಕಾರವಾರ: ಆರ್‌ಎಸ್‌ಎಸ್ ಒಂದು ಆನೆ ಇದ್ದ ಹಾಗೆ. ನಿಮ್ಮ ಬೊಗಳುವಿಕೆಯಿಂದ ಆನೆ ಬಗ್ಗುವುದಿಲ್ಲ. ಕುಗ್ಗುವುದಿಲ್ಲ. ನಿರಂತರವಾಗಿ ತನ್ನ ಕಾರ್ಯವನ್ನು ಮುಂದುವರಿಸಲಿದೆ ಎಂದು ಶ್ರೀರಾಮ ಸೇನೆಯ ಅಧ್ಯಕ್ಷ ಪ್ರಮೋದ ಮುತಾಲಿಕ್ ಹೇಳಿದರು.

ಕಾರವಾರದಲ್ಲಿ ಸೋಮವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಆರ್‌ಎಸ್‌ಎಸ್ ಬ್ಯಾನ್ ಮಾಡುವ ಬಗ್ಗೆ ರಾಜ್ಯದಲ್ಲಿ ನಡೆದಿರುವ ಚರ್ಚೆಯ ಕುರಿತು, ಸಚಿವ ಪ್ರಿಯಾಂಕ್ ಖರ್ಗೆ, ಎಂಎಲ್‌ಸಿ ಬಿ.ಕೆ.ಹರಿಪ್ರಸಾದ್ ಅವರ ಹೇಳಿಕೆಗಳಿಗೆ ತಿರುಗೇಟು ನೀಡಿದರು.

ನೀವು ಸರ್ಕಾರಿ ಜಾಗಗಳಲ್ಲಿ ಆರ್‌ಎಸ್‌ಎಸ್ ಶಾಖೆಗಳನ್ನು, ಸಭೆಗಳನ್ನು ಬಂದ್ ಮಾಡಬಹುದು. ಆದರೆ, ಶಾಖೆ ನಡೆಸಲು ಅದೊಂದೇ ಜಾಗ ಇದೆ ಎಂದುಕೊಂಡಿದ್ದೀರಾ ಎಂದು ಪ್ರಿಯಾಂಕ ಖರ್ಗೆ ಅವರಿಗೆ ಪ್ರಶ್ನೆ ಹಾಕಿದರು. ಆರ್‌ಎಸ್‌ಎಸ್ ಬ್ಯಾನ್ ಮಾಡಲು ಸಾಧ್ಯವಿಲ್ಲ ಏಕೆಂದರೆ, ಅದು ಕೋಟ್ಯಂತರ ಜನ ಮನ್ನಣೆ ಕೊಟ್ಟಿದ್ದರಿಂದಲೇ ಸಂಘವು ಶತಮಾನಗಳಿಂದ ಹಾಳಾಗದೇ ಹೋಳಾಗದೇ ಉಳಿದಿದೆ. ಶಿಸ್ತಿನ, ದೇಶಭಕ್ತಿಯ ನಾಗರಿಕರನ್ನು ನಿರ್ಮಾಣ ಮಾಡುವ ಕಾರ್ಯವನ್ನು ನಿರಂತರವಾಗಿ 100 ವರ್ಷಗಳಿಂದ ಮಾಡುತ್ತ ಬಂದ ರಾಷ್ಟçದ ಏಕೈಕ ರಾಜಕೀಯೇತರ ಸಂಸ್ಥೆಯಾಗಿದೆ. ನಮ್ಮ ದೇಶದಲ್ಲಿ ಮಾತ್ರವಲ್ಲ ವಿಶ್ವದ 250 ದೇಶಗಳಲ್ಲಿ ಆರ್‌ಎಸ್‌ಎಸ್ ಕೆಲಸ ಮಾಡುತ್ತಿದೆ ಎಂದರು.

100 ವರ್ಷಗಳ ಆರ್‌ಎಸ್‌ಎಸ್ ಪುಕ್ಕಟೆ ಅಲ್ಲ. ನಿಮ್ಮ ಕಾಂಗ್ರೆಸ್‌ಗೆ 130 ವರ್ಷವಾಯಿತು. ಹಾಳಾಗಿ, ಹೋಳಾಗಿ ದೇಶವನ್ನು ಹಾಳು ಮಾಡುವಂಥ ಕೆಲಸ ಮಾಡಿದ ಅದೆಷ್ಟೋ ಉದಾಹರಣೆಗಳಿವೆ. ಆದರೆ, ಸ್ವಯಂ ಸೇವಕ ಸಂಘ ಆ ರೀತಿಯ ಯಾವುದೇ ಕಾರ್ಯವನ್ನು ಮಾಡಿಲ್ಲ. ನಿಷೇಽಸಿ ಎಂದು ಹೇಳಲು ಆರ್‌ಎಸ್‌ನವರು ಬಾಂಬ್, ತಲವಾರ್ ಹಿಡಿದು ಓಡಾಡಿದ್ದಾರಾ ಎಂದು ಪ್ರಶ್ನಿಸಿದರು.

ಶತ್ರು ರಾಷ್ಟçಕ್ಕೆ ಜಿಂದಾಬಾದ್ ಎಂಬುವವರನ್ನು ನಿರ್ಬಂಽಸುವ ಬದಲು, ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಇಟ್ಟವರನ್ನು ನಿರ್ಬಂಽಸುವ ಬದಲು ಮದ್ದೂರಿನಲ್ಲಿ ಮೆರವಣಿಗೆಯ ಮೇಲೆ ಕಲ್ಲು ಎಸೆದವರನ್ನು ನಿರ್ಬಂಽಸುವ ಬದಲು ತಾಲೀಬಾನಿಗಳನ್ನು ನಿರ್ಬಂಽಸುವ ಬದಲು ಭಾರತ ಮಾತಾಕಿ ಜೈ ಎಂದವರನ್ನು ಬ್ಯಾನ್ ಮಾಡಿ ಎಂದು ಹೇಳುತ್ತೀರಿ. ಕಾಂಗ್ರೆಸ್‌ನವರೇ ಆರ್‌ಎಸ್‌ಎಸ್‌ನ್ನು ಇದೇ ರೀತಿ ಬಯ್ಯುತ್ತಿದ್ದರೆ ನೀವು ಸರ್ವನಾಶವಾಗಿ ಹೋಗುತ್ತೀರಿ ಎಂದು ಮುತಾಲಿಕ್ ಶಾಪ ಹಾಕಿದರು.

ರಾಜ್ಯದ 32 ಕಡೆಗೆ, ಅಷ್ಟೇ ಏಕೆ ವಿಧಾನಸೌಧದಲ್ಲೇ ಶತ್ರು ರಾಷ್ಟ್ರ ಜಿಂದಾಬಾದ್ ಎಂದು ಘೋಷಣೆ ಕೂಗಿದವರನ್ನು ಇನ್ನೂ ಬಂಧಿಸಿಲ್ಲ ಏಕೆಂದರೆ ನಿಮ್ಮ ವೋಟ್ ಬ್ಯಾಂಕ್ ಅಲ್ಲಿದೆ. ನೀವು ತುಷ್ಟೀಕರಣ ರಾಜಕಾರಣ ಮಾಡುತ್ತಿದ್ದೀರಿ ಎಂದು ದೂರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net