ಸಾಧಕ ಐವರು ಮಕ್ಕಳಿಗೆ 'ಪ್ರಮಾ' ಪ್ರಶಸ್ತಿ

Prama
Published on

ಮಣಿಪಾಲದಲ್ಲಿ ನ.15ರಂದು ಪ್ರಶಸ್ತಿ ಪ್ರದಾನ

ವಿಜಯವಾಣಿ ಸುದ್ದಿಜಾಲ ಉಡುಪಿ

ಡಾ.ಪಳ್ಳತ್ತಡ್ಕ ಕೇಶವ ಭಟ್​ ಮೆಮೋರಿಯಲ್​ ಟ್ರಸ್ಟ್​ ವತಿಯಿಂದ ಪ್ರತಿಭಾವಂತ ಮಕ್ಕಳಿಗೆ ಕೊಡಮಾಡುವ 12ನೇ ವರ್ಷದ ಪ್ರಮಾ-2025ರ ಪ್ರಶಸ್ತಿಗೆ ಐವರು ಮಕ್ಕಳು ಆಯ್ಕೆ ಆಗಿದ್ದಾರೆ.

ಶ್ರೀಶ ಭಟ್​ ಕನ್ನರ್ಪಾಡಿ (ವೇದ), ಆದ್ಯಾ ಯು. (ತಬಲಾ), ಆಪ್ತಾ ಚಂದ್ರಮತಿ ಮುಳಿಯ (ವಿಜ್ಞಾನ), ಸ್ವಸ್ತಿ ಎಂ. ಭಟ್​ (ಸಂಗೀತ), ಸುಶಾಂತ್​ ಎಸ್​. ಭಟ್​ (ಯಕ್ಷಗಾನ) ಪ್ರಮಾ ಪ್ರಶಸ್ತಿಗೆ ಆಯ್ಕೆಯಾಗಿರುವ ಸಾಧಕ ಮಕ್ಕಳು.

ಪ್ರಶಸ್ತಿ ಪ್ರದಾನ ಸಮಾರಂಭವು ನ.15ರಂದು ಸಂಜೆ 4 ಗಂಟೆಗೆ ಮಣಿಪಾಲದಲ್ಲಿರುವ ಮಣಿಪಾಲ್​ ಡಾಟ್​ನೆಟ್​ ಸಭಾಂಗಣದಲ್ಲಿ ನಡೆಯಲಿದೆ. ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ.ಸದಾಶಿವ ರಾವ್​ ಕೆ. ಅಧ್ಯಕ್ಷತೆ ವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಪ್ರಶಸ್ತಿ ಪುರಸ್ಕೃತ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಟ್ರಸ್ಟ್​ನ ವಿದುಷಿ ಪವನಾ ಬಿ. ಆಚಾರ್​ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net