ನವಲಗುಂದದಲ್ಲಿ ಪ್ರಲ್ಹಾದ ಜೋಶಿ ಚುನಾವಣೆ ಪ್ರಚಾರ

New Navalagund Bjp new
Published on

ಹುಬ್ಬಳ್ಳಿ : ಕೇಂದ್ರ ಸಚಿವ ಹಾಗೂ ಧಾರವಾಡ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿ ಅವರು ನವಲಗುಂದ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಭದ್ರಾಪೂರ, ಮಣಕವಾಡ, ಶಿಶ್ವಿನಹಳ್ಳಿ, ಬಲ್ಲರವಾಡ ಮತ್ತು ನಾಗರಹಳ್ಳಿ ಗ್ರಾಮಗಳಲ್ಲಿ ಚುನಾವಣೆ ಪ್ರಚಾರ ಸಭೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಲ್ಹಾದ ಜೋಶಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತವು 5ನೇ ಅತಿ ದೊಡ್ಡ ಆರ್ಥಿಕತೆಯಾಗಿದೆ. ಸಾಮಾನ್ಯ ಜನರಿಗಾಗಿ ಮೂಲಸೌಕರ್ಯ ಅಭಿವೃದ್ಧಿಯಾಗಿದೆ ಹಾಗೂ ರಾಷ್ಟ್ರೀಯ ಭದ್ರತೆಯೂ ಸುಧಾರಿಸಿದೆ ಎಂದರು. ಭಾರತದ ಈ ಸರ್ವತೋಮುಖ ಏಳಿಗೆ ಹೀಗೆ ಮುಂದುವರೆಯಲು ಬಿಜೆಪಿಯನ್ನು ಬಹುಮತದಿಂದ ಗೆಲ್ಲಿಸಿ, ನರೇಂದ್ರ ಮೋದಿ ಅವರನ್ನು ಮೂರನೇ ಅವಧಿ ಪ್ರಧಾನಿಯನ್ನಾಗಿಸೋಣ ಎಂದು ಮತಯಾಚಿಸಿದರು.

ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಷಣ್ಮುಖ ಗುರಿಕಾರ, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಕಾಶ ಅಂಗಡಿ, ಚಂಬಣ್ಣ ಅಕ್ಕಿ, ಸಿ.ಸಿ. ಅಕ್ಕಿ, ಮಂಜುನಾಥ ಅಕ್ಕಿ, ಮಲ್ಲಿಕಾರ್ಜುನ ದೇಸಾಯಿ, ಮುಖಂಡರಾದ ಸಿದ್ದನಗೌಡ್ರ ಪಾಟೀಲ, ಲಿಂಗಯ್ಯ ಬಣ್ಣದನೂರುಮಠ, ಕಲ್ಲಯ್ಯ ಪುರದಣ್ಣನವರ ಹಾಗೂ ಪ್ರಮುಖರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net