ನೃಪತುಂಗ ಬೆಟ್ಟದಲ್ಲಿ ಪ್ರಲ್ಹಾದ ಜೋಶಿ ಮತಯಾಚನೆ

New JoShi Betta 21356
Published on

ಹುಬ್ಬಳ್ಳಿ : ಕೇಂದ್ರ ಸಚಿವ ಹಾಗೂ ಧಾರವಾಡ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿ ಅವರು ಬೆಳ್ಳಂಬೆಳಗ್ಗೆ ಉದ್ಯಾನಗಳಿಗೆ ಭೇಟಿ ನೀಡಿ, ವಾಯು ವಿಹಾರಿಗಳಿಂದ ಮತಯಾಚಿಸುತ್ತಿದ್ದಾರೆ.

ಎರಡು ದಿನಗಳ ಹಿಂದಷ್ಟೇ ತೋಳನಕೆರೆಗೆ ಭೇಟಿ ನೀಡಿ, ವಾಯು ವಿಹಾರಿಗಳನ್ನು ಭೇಟಿ ಮಾಡಿದ್ದ ಪ್ರಲ್ಹಾದ ಜೋಶಿ, ಮಂಗಳವಾರ ನೃಪತುಂಗಕ್ಕೆ ಭೇಟಿ ನೀಡಿ, ವಾಯು ವಿಹಾರಿಗಳಿಂದ ಮತಯಾಚಿಸಿದರು.

ಭಾರತ ವಿಶ್ವಗುರು ಆಗಲು ನರೇಂದ್ರ ಮೋದಿ ಅವರನ್ನು ಬೆಂಬಲಿಸುವಂತೆ ವಾಯು ವಿಹಾರಿಗಳನ್ನು ಕೋರಿದರು.

ಶಾಸಕ ಮಹೇಶ ಟೆಂಗಿನಕಾಯಿ, ಮಹಾನಗರ ಪಾಲಿಕೆ ಸದಸ್ಯರಾದ ವೀರಣ್ಣ ಸವಡಿ, ಸಂತೋಷ ಚವ್ಹಾಣ, ರೂಪಾ ಶೆಟ್ಟಿ, ಮುಖಂಡರಾದ ಚನ್ನು ಹೊಸಮನಿ, ಸಿದ್ದು ಮೊಗಲಿಶೆಟ್ಟರ, ಶಿವಯ್ಯ ಹಿರೇಮಠ, ಈಶ್ವರಗೌಡ ಪಾಟೀಲ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net