ವನಿತಾ ಮಹಿಳಾ ಕಾಲೇಜಿಗೆ ಸ್ಫೂರ್ತಿ, ಪ್ರಕೃತಿ ಪ್ರಥಮ

1 SPOORTI KUMBAR 94%
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ನಗರದ ವನಿತಾ ಮಹಿಳಾ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ ವಿದ್ಯಾರ್ಥಿನಿಯರು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಸ್ಫೂರ್ತಿ ಕುಂಬಾರ ಶೇ. 94.5 ಅಂಕ ಪಡೆದು ಪ್ರಥಮ, ಸನ್ಮತಿ ಸಣ್ಣಮ್ಮನವರ ಶೇ. 90 ದ್ವಿತೀಯ, ವಿಜಯಲಕ್ಷ್ಮೀ ಮಾನಕರ ಶೇ. 85 ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾಳೆ.

ಕಲಾ ವಿಭಾಗದಲ್ಲಿ ಪ್ರಕೃತಿ ನಾಗನೂರ ಶೇ. 91 ಪ್ರಥಮ, ಪ್ರೀತಿ ಹೊಸಮನಿ ಶೇ. 89 ದ್ವಿತೀಯ, ಸೀಮಾ ಹೂಜಿ ಶೇ. 87 ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾಳೆ. ವಿದ್ಯಾರ್ಥಿಗಳ ಸಾಧನೆಯನ್ನು ಶಾಲಾ ಆಡಳಿತ ಮಂಡಳಿ, ಪ್ರಾಚಾರ್ಯ ಆರ್.…ಬಿ. ದೊಡಮನಿ ಹಾಗೂ ಬೋಧಕರು ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net