

ಗೋಕಾಕ: ಪ್ರಕೃತಿ ಇಲ್ಲದೆ ಮಾನವ ಬದುಕು ಅಪೂರ್ಣ ಎಂದು ಧಾರವಾಡದ ಪಕ್ಷಿ ತಜ್ಞ ಪ್ರಕಾಶ ಗೌಡರ ಹೇಳಿದರು.
ನಗರದ ಲಕ್ಷ್ಮೀ ಎಜುಕೇಶನ್ ಟ್ರಸ್ಟ್ಟ್ ಸಭಾ ಭವನದಲ್ಲಿ ಪ್ರಾದೇಶಿಕ ಅರಣ್ಯ ವಿಭಾಗಗಳು ಹಾಗೂ ಶ್ರೀಲಕ್ಷ್ಮಣರಾವ್ ಜಾರಕಿಹೊಳಿ ಶಿಕ್ಷಣ ಮಹಾವಿದ್ಯಾಲಯ ಇವರ ಸಂಯುಕ್ತಾಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿಶ್ವ ವಲಸೆ ಪಕ್ಷಿಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರಕೃತಿ ಪುಸ್ತಕದಲ್ಲಿ ನೋಡುವ ಬದಲು ನೈಜವಾಗಿ ನೋಡಬೇಕು. ಪಕ್ಷಿ ಸಂಕುಲ ಮನುಷ್ಯನ ಬದುಕಿನಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಹೀಗಾಗಿ ಪಕ್ಷಿಗಳ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ ಎಂದರು. ಮಲ್ಲಾಪುರ ಪಿಜಿ ಪಪಂ ಸಮೀಪದಲ್ಲಿರುವ ಘಟಪ್ರಭಾ ಪಕ್ಷಿಧಾಮ ಕುರಿತು ಕಿರು ಹೊತ್ತಿಗೆ ಬಿಡುಗಡೆ ಗೊಳಿಸಲಾಯಿತು.
ಪ್ರಾಚಾರ್ಯ ಡಾ.ಎ.ಬಿ.ಪಾಟೀಲ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ವಸೀಂರಾಜ ತೇನಗಿ, ವಲಯ ಅರಣ್ಯಾಧಿಕಾರಿ ಆನಂದ ಹೆಗಡೆ, ಉಪವಲಯ ಅರಣ್ಯಾಧಿಕಾರಿ ಅಶೋಕ ಮಾಧುರಿ, ಹನಮಂತ ಇಂಗಳಗಿ, ಹನಮಂತ ಹಮ್ಮನವರ, ಸಂಪತ್ ಸಿಂಪಿ, ಸುರೇಶ ಕುಂದರಗಿ, ಅರಣ್ಯ ಪಾಲಕರಾದ ನರಸಿಂಹ ಈರಯ್ಯನವರ, ಸಂಜು ನಾಯ್ಕ, ಗೀತಾ ಮಲ್ಲಿಮಾರ, ಮಹಾಂತೇಶ ಜಾಮುನಿ ಇತರರಿದ್ದರು.