ಸಮಗ್ರ ತನಿಖೆಗೆ ಕಾಂಗ್ರೆಸ್ ಆಗ್ರಹ

Published on

ವಿಟ್ಲ: ಅನಂತಾಡಿ ಗ್ರಾಮದ ಬಾಬನಕಟ್ಟೆ ನಿವಾಸಿ ಬಲ್ಲು ಕೊರಗ ಎಂಬವರಿಗೆ ಸರ್ಕಾರ ಯೋಜನೆಯಾದ ಅಂಬೇಡ್ಕರ್ ಆವಾಝ್ ಯೋಜನೆಯ ಮೂಲಕ ಅನುದಾನ ಬಿಡುಗಡೆಗೊಂಡು, ಮನೆ ನಿರ್ಮಾಣದ ಕಾಮಗಾರಿ ಪೂರ್ಣಗೊಂಡು, ಗೃಹಪ್ರವೇಶಕ್ಕೆ ತಯಾರಾಗಿರುತ್ತದೆ. ಇದು ಸ್ಥಳೀಯ ಪಂಚಾಯಿತಿಯ ಶ್ಲಾಘನೀಯ ಕಾರ್ಯ. ಆದರೆ ಈ ಕಾಮಗಾರಿಯನ್ನು ಬಿಜೆಪಿ ತನ್ನ ಶಕ್ತಿ ಕೇಂದ್ರದ ಸಂಪೂರ್ಣ ಅನುದಾನವೆಂದು ಬಿಂಬಿಸಿ, ತಾಲೂಕು, ಜಿಲ್ಲಾಮಟ್ಟದ ಪಕ್ಷದ ನಾಯಕರನ್ನು ಕರೆಸಿ, ಉದ್ಘಾಟನೆಯ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಯೋಜಿಸಿದೆ. ಆ ಮೂಲಕ ಬಿಜೆಪಿ ತನ್ನ ಸಣ್ಣತನವನ್ನು ಪ್ರದರ್ಶಿಸುತ್ತಿದೆ. ಬಿಜೆಪಿಯ ಈ ಕಾರ್ಯ ಸಾರ್ವಜನಿಕ ವಲಯದಲ್ಲಿ ಅನುಮಾನಕ್ಕೆ ಎಡೆಮಾಡಿದೆ. ಆದುದರಿಂದ, ಸಾರ್ವಜನಿಕರ ಪರವಾಗಿ ಸಮಗ್ರ ತನಿಖೆಗೆ ಆಗ್ರಹಿಸುತ್ತೇವೆ ಎಂದು ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ಸಿನ ಮಹಿಳಾ ವಿಭಾಗದ ಅಧ್ಯಕ್ಷೆ ಜಯಂತಿ. ವಿ.ಪೂಜಾರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net