ಸಚಿವ ರಾಜಣ್ಣಗೆ ಗೌರವಿಸಿದ ಪ್ರಕಾಶ ತಪಶೆಟ್ಟಿ

Prakash Tapashetti honored Minister Rajanna
ಬಾಗಲಕೋಟೆಯ ಬಸವೇಶ್ವರ ಸಹಕಾರಿ ಬ್ಯಾಂಕಿಗೆ ಭೇಟಿ ನೀಡಿದ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಅವರನ್ನು ಬ್ಯಾಂಕ್ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಸನ್ಮಾನಿಸಿ ಗೌರವಿಸಿದರು. ಮಾಜಿ ಸಚಿವ ಎಸ್.ಆರ್.ಪಾಟೀಲ, ಶಾಸಕ ಎಚ್.ವೈ.ಮೇಟಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜಯಕುಮಾರ ಸರನಾಯಕ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಕಾಶಿನಾಥ ಹುಡೇದ, ಬಸವೇಶ್ವರ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ಎಂ.ಜಿ.ವಾಲಿ ಇದ್ದರು.
Published on

ಬಾಗಲಕೋಟೆ: ಇಲ್ಲಿನ ಪ್ರತಿಷ್ಠಿತ ಬಸವೇಶ್ವರ ಸಹಕಾರಿ ಬ್ಯಾಂಕಿಗೆ ಶುಕ್ರವಾರ ಭೇಟಿ ನೀಡಿದ ಸಹಕಾರಿ ಸಚಿವ ಕೆ.ಎನ್. ರಾಜನ್ ಅವರನ್ನು ಬ್ಯಾಂಕ್ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಸನ್ಮಾನಿಸಿ ಗೌರವಿಸಿದರು.

ಪ್ರಕಾಶ ತಪಶೆಟ್ಟಿ ಅವರು ಸಹಕಾರಿ ಕ್ಷೇತ್ರದ ಬೆಳವಣಿಗೆ ಹಾಗೂ ಸಮಸ್ಯೆಗಳ ಕುರಿತು ಸಚಿವರ ಜತೆ ಚರ್ಚಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ರಾಜಣ್ಣ ಎಲ್ಲ ವಿಷಯಗಳನ್ನು ಸಮಾಧಾನದಿಂದ ಆಲಿಸಿ ಪರಿಹಾರ ನೀಡಲು ಪ್ರಯತ್ನಿಸುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಸ್.ಆರ್.ಪಾಟೀಲ, ಶಾಸಕ ಎಚ್.ವೈ.ಮೇಟಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜಯಕುಮಾರ ಸರನಾಯಕ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಕಾಶಿನಾಥ ಹುಡೇದ, ಬಸವೇಶ್ವರ ಸಹಕಾರಿ ಬ್ಯಾಂಕಿನ ಉಪಾಧ್ಯಕ್ಷ ಎಂ.ಜಿ.ವಾಲಿ, ನಿರ್ದೇಶಕರಾದ ವಿ.ವಿ.ಶಿರಗಣ್ಣವರ, ಎಸ್.ಟಿ.ಬಳ್ಳಾರಿ, ಎಸ್.ಎಸ್ ಕಂಕಣಮೇಲಿ, ಆರ್.ವೈ.ಪಟ್ಟಣದ, ಎಸ್.ಎಸ್.ಜಿಗಳೂರ, ಎನ್.ಎಫ್.ಪಲ್ಲೇದ, ಎಸ್.ಎಸ್.ಜಂಗಿ, ಜೆ.ಸಿ.ಅಬ್ದುಲಪೂರ, ಯು.ಎಸ್ ಜಿಗಜಿನ್ನಿ, ಎನ್.ಆರ್.ಕುಲಕರ್ಣಿ, ಬಿ.ಎಸ್.ಹಿರೇಗೌಡರ, ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿ.ಸಿ.ಕೇಮಾಳಿ, ಅಧಿಕಾರಿಗಳಾದ ಬಿ.ಎಸ್.ನಾವಲಗಿ, ಎಸ್.ಬಿ.ಬದಾಮಿ, ಎಂ.ಎಸ್.ಗುಡಗುಂಟಿ, ಪಿ.ಎನ್.ಹಳ್ಳಿಕೇರಿ, ವಿ.ಎಂ.ಹಿರೇಮಠ, ಜೆ.ಜಿ ನಾವಲಗಿ, ಎಸ್.ಎಚ್.ಕುರ್ತಕೋಟಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net