ಶಿಕಾರಿಪುರ ತಾಪಂ ಅಧ್ಯಕ್ಷರಾಗಿ ಸುರೇಶ್​ನಾಯ್್ಕ

19 skp 1
Published on

ಶಿಕಾರಿಪುರ: ಶಿಕಾರಿಪುರ ತಾಲೂಕು ಪಂಚಾಯಿತಿ ಅಧ್ಯಕ್ಷರಾಗಿ ಕೊನೆಯ ಅವಧಿಗೆ ಗುರá-ವಾರ ಅಂಜನಾಪುರ ಕ್ಷೇತ್ರದ ಸದಸ್ಯ ಸುರೇಶ್ ನಾಯ್್ಕ ಅವಿರೋಧ ಆ್ಕಯೆಾದರು.

ನಿಕಟಪೂರ್ವ ಅಧ್ಯಕ್ಷರಾಗಿದ್ದ ಉಡುಗಣಿ ಪ್ರಕಾಶ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿತ್ತು. ಪಕ್ಷದ ಆಂತರಿಕ ಒಪ್ಪಂದದ ಪ್ರಕಾರ ಅ.21ರಂದು ಉಡುಗಣಿ ಪ್ರಕಾಶ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ತಾಲೂಕು ಪಂಚಾಯಿತಿಯಲ್ಲಿ ಬಿಜೆಪಿ ಬಹá-ಮತ ಹೊಂದಿದ್ದು ಒಟ್ಟು 19 ಸದಸ್ಯ ಬಲದ ತಾಪಂನಲ್ಲಿ ಬಿಜೆಪಿ 12 ಮತ್ತು ಕಾಂಗ್ರೆಸ್ ಏಳು ಸದಸ್ಯರನ್ನು ಹೊಂದಿವೆ. ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮೀಸಲಾತಿ ಇದ್ದು ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ.

ಪ್ರತಿ ಬಾರಿಯೂ ಅಧ್ಯಕ್ಷ ಗಾದಿಯ ಪ್ರಬಲ ಆಕಾಂಕ್ಷಿಯಾಗಿದ್ದ ಸುರೇಶ್​ನಾಯ್ಕ್ ಅವರಿಗೆ ಈ ಬಾರಿ ಅದೃಷ್ಟ ಒಲಿದಿದೆ. ಮಾಜಿ ಅಧ್ಯಕ್ಷರಾದ ಉಡುಗಣಿ ಪ್ರಕಾಶ್, ಕವಲಿ ಸುಬ್ರಹ್ಮಣ್ಯ, ಆರ್.ಕೆ.ಶಂಭು, ಪರಮೇಶ್ವರಪ್ಪ, ಪುರಸಭೆ ಸದಸ್ಯರಾದ ಪ್ರಶಾಂತ್ ಜೀನಳ್ಳಿ, ಟಿಎಪಿಸಿಎಂಎಸ್ ನಿರ್ದೇಶಕ ಎಸ್.ಎಸ್.ರಾಘವೇಂದ್ರ. ಬಿಜೆಪಿ ನಗರ ಯುವಮೋರ್ಚಾ ಅಧ್ಯಕ್ಷ ಬೆಣ್ಣೆ ಪ್ರವೀಣ್, ಗಿಡ್ಡಪ್ಪ, ವಿನಯ್, ನಿಶಾಂತ್ ಮತ್ತು ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net