

ವಿಜಯವಾಣಿ ಸುದ್ದಿಜಾಲ ಉಪ್ಪಿನಂಗಡಿ
ಇಲ್ಲಿನ ಸಹಕಾರಿ ವ್ಯವಸಾಯಿಕ ಸಂಘದ ಆಡಳಿತ ಮಂಡಳಿಯಲ್ಲಿ ತೆರವಾದ ಕೃಷಿ ಕ್ಷೇತ್ರದ ಸಾಮಾನ್ಯ ನಿರ್ದೇಶಕ ಸ್ಥಾನಕ್ಕೆ ಸಹಕಾರ ಭಾರತಿ ಬೆಂಬಲಿತ ಅಭ್ಯರ್ಥಿ ಪ್ರಕಾಶ್ ರೈ ಬೆಳ್ಳಿಪ್ಪಾಡಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಬಿಜೆಪಿ ಮತ್ತು ಸಹಕಾರ ಭಾರತಿಯ ಬೆಂಬಲಿತರಾಗಿ ಪ್ರಕಾಶ್ ರೈ ಬೆಳ್ಳಿಪ್ಪಾಡಿ, ಸದಾನಂದ ಶೆಟ್ಟಿ, ಪುತ್ತಿಲ ಪರಿವಾರದಿಂದ ಹರಿಪ್ರಸಾದ್ ಶೆಟ್ಟಿ, ಧರ್ನಪ್ಪ ನಾಯ್ಕ ಹಾಗೂ ಪಕ್ಷೇತರರಾಗಿ ಬಾಲಚಂದ್ರ ಜಿ. ನಾಮಪತ್ರ ಸಲ್ಲಿಸಿದರು. ಸೋಮವಾರ ಪ್ರಕಾಶ್ ರೈ ಹೊರತುಪಡಿಸಿ ಉಳಿದವರೆಲ್ಲರೂ ನಾಮಪತ್ರ ಹಿಂತೆಗೆದುಕೊಂಡಿದ್ದಾರೆ.
ಕೃಷಿ ಕ್ಷೇತ್ರದ ಸಾಮಾನ್ಯ ಸ್ಥಾನದಿಂದ ಚುನಾಯಿತರಾಗಿದ್ದ ಸಹಕಾರ ಭಾರತಿ ಬೆಂಬಲಿತ ಅಭ್ಯರ್ಥಿ ಸದಾನಂದ ಶೆಟ್ಟಿ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ಈ ಆಯ್ಕೆ ಮಾಡಲಾಯಿತು.
ಬಿಜೆಪಿ ಅಭಿನಂದನೆ: ನಿರ್ದೇಶಕ ಪ್ರಕಾಶ್ ರೈ ಬೆಳ್ಳಿಪ್ಪಾಡಿ ಅವರನ್ನು ಬಿಜೆಪಿ ವತಿಯಿಂದ ಅಭಿನಂದಿಸಲಾಯಿತು. ಮಾಜಿ ಶಾಸಕ ಸಂಜೀವ ಮಠಂದೂರು, ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಸುನೀಲ್ ಕುಮಾರ್ ದಡ್ಡು, ಪ್ರಮುಖರಾದ ದಯಾನಂದ ಸರೋಳಿ, ದಯಾನಂದ ಶೆಟ್ಟಿ ಉಜಿರೆಮಾರ್, ವಿದ್ಯಾಧರ ಜೈನ್, ಸದಾನಂದ ಶೆಟ್ಟಿ, ಗಂಗಾಧರ ಎನ್., ಜಯಂತ ಪೊರೋಳಿ, ಸುರೇಶ್ ಅತ್ರೆಮಜಲು, ಹರಿರಾಮಚಂದ್ರ, ಸಂತೋಷ್ ಕುಮಾರ್ ಪಂರ್ದಾಜೆ, ಹಮ್ಮಬ್ಬ ಶೌಕತ್ ಅಲಿ, ಆದೇಶ್ ಶೆಟ್ಟಿ, ಲಕ್ಷ್ಮಣ ಗೌಡ ನೆಡ್ಚಿಲು, ಪ್ರಸಾದ್ ಭಂಡಾರಿ, ಸದಾನಂದ ನೆಕ್ಕಿಲಾಡಿ, ರಾಜೇಶ್ ಶಾಂತಿನಗರ, ವಸಂತ ಪಿ., ಉಷಾ ಮುಳಿಯ, ಗೀತಾ, ಸಂಧ್ಯಾ ಉಪಸ್ಥಿತರಿದ್ದರು.