ಜಿಲ್ಲಾಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಅಮೋ ಸಾಧನೆಗೈದ ಪ್ರಕಾಶ ಚವ್ಹಾಣ

mm 4-10
Published on

ವಿಜಯಪುರ : ನಗರ ಹೊರ ವಲಯದ ಬೇಗಂ ತಲಾಬ್​ ತಾಂಡಾ ನಿವಾಸಿ ಪ್ರಕಾಶ ಚವ್ಹಾಣ ಜಿಲ್ಲಾಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಅಮೋ ಸಾಧನೆಗೈದಿದ್ದಾನೆ.

ರಾಜ್ಯ ಯೋಗಾಸನ ಕ್ರೀಡಾ ಸಂಸ್ಥೆ ವತಿಯಿಂದ ವಿಜಯಪುರ ತಾಲೂಕಿನ ತಿಡಗುಂದಿ ಗ್ರಾಮದ ಮಾನಸಗಂಗೋತ್ರಿ ಶಾಲೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಸ್ಪರ್ಧೆಯ ಸಿನಿಯರ್​ "ಎ' ವಿಭಾಗದ ಕಲಾತ್ಮಕ ಯೋಗಾಸನದ ವೈಯಕ್ತಿಕದಲ್ಲಿ ಪ್ರಥಮ, ಹ್ಯಾಂಡ್​ ಬ್ಯಾಲೆನ್ಸ್​ ವೈಯಕ್ತಿಕದಲ್ಲಿ ಪ್ರಥಮ ಹಾಗೂ ಫಾರವರ್ಡ್​ ಬೆಂಡಿಂಗ್​ ವೈಯಕ್ತಿಕ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾನೆ ಎಂದು ಪ್ರಕಟಣೆಯು ತಿಳಿಸಿದೆ.

ಜಿಲ್ಲಾಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಅಮೋ ಸಾಧನೆಗೈದ ಪ್ರಕಾಶ ಚವ್ಹಾಣ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net