

ಮಂಗಳೂರು: ನಗರದ ಸೂಟರ್ ಪೇಟೆಯಲ್ಲಿರುವ ಪ್ರಜ್ವಲ್ ಯುವಕ ಮಂಡಲ ಜಿಲ್ಲೆಯ ಯುವ ಸಂಘಟನೆಯಲ್ಲಿ ಮಂಚೂಣಿಯಲ್ಲಿರುವ ಸಂಘಟನೆಗಳಲ್ಲಿ ಒಂದು. ಜಿಲ್ಲಾ ರಾಜ್ಯೋತ್ಸವ ಪಡೆದಿರುವ ಈ ಯುವಕ ಮಂಡಲ 25 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿ ಅತ್ಯುತ್ತಮ ಸಂಘಟನೆಯಾಗಿ ಗುರುತಿಸಿಕೊಂಡದ್ದು, ಇದರ ಸೇವಾ ಕಾರ್ಯಗಳು ಕೂಡ ಸಮಾಜಮುಖಿಯಾಗಿವೆ ಎಂದು ಶಾಸಕ ಡಿ.ವೇದವ್ಯಾಸ ಕಾಮತ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸೂಟರ್ ಪೇಟೆ ಶ್ರೀ ಕೋರ್ದಬ್ಬು ದೈವಸ್ಥಾನದ ಸಂಕೀರ್ಣದಲ್ಲಿ ಪ್ರಜ್ವಲ್ ಯುವಕ ಮಂಡಲದ ನೂತನ ಕಚೇರಿಯನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.
ಅಧ್ಯಕ್ಷತೆಯನ್ನು ಸೂಟರ್ ಪೇಟೆ ಶ್ರೀ ಕೋರ್ದಬ್ಬು ದೈವಸ್ಥಾನದ ಗುರಿಕಾರ ಎಸ್. ರಾಘವೇಂದ್ರ ಅವರು ವಹಿಸಿದ್ದರು.
ಮುಖ್ಯಅತಿಥಿಗಳಾಗಿ ಮಂಗಳೂರು ಕೇಂದ್ರ ಉಪ ವಿಭಾಗದ ಎಸಿಪಿ ಮಹೇಶ್ ಕುಮಾರ್ , ಪಾಲಿಕೆ ಸದಸ್ಯ ಎಸ್. ಭರತ್ ಕುಮಾರ್ , ಕ್ರೀಡಾ ಅಂಕಣಕಾರ ಹಾಗೂ ಯುವಕ ಮಂಡಲದ ಗೌರವ ಸಲಹೆಗಾರ ಎಸ್.ಜಗದೀಶ್ಚಂದ್ರ ಅಂಚನ್ , ನೆಹರೂ ಯುವ ಕೇಂದ್ರದ ಸಮನ್ವಯಾಧಿಕಾರಿ ಎಸ್. ರಘುವೀರ್ , ಸೂಟರ್ ಪೇಟೆ ಕೋರ್ದಬ್ಬು ದೈವಸ್ಥಾನದ ಬಬ್ಬುಸ್ವಾಮಿ ಪಾತ್ರಿ ಎಸ್. ಗಣೇಶ್ , ಗೌರವ ಸಲಹೆಗಾರರಾದ ಕೆ.ಕೆ.ಪೇಜಾವರ, ಯು.ಬಿ. ಪೃಥ್ವಿರಾಜ್ ಬಂಗೇರ , ಯುವಕ ಮಂಡಲದ ಅಧ್ಯಕ್ಷ ಸೃಜನ್ ಮಾನವ್ ಹಾಗೂ ನಿಕಟ ಪೂರ್ವ ಮಹೇಶ್ ಕುಮಾರ್ ಭಾಗವಹಿಸಿದರು.
ಯುವಕ ಮಂಡಲದ ಪದಾಧಿಕಾರಿಗಳಾದ ಎಸ್.ಶರತ್, ಅಮರ್ ಎಸ್.ವಿ., ಲಕ್ಷ್ಮಣ್ ಪಡೀಲ್, ಎಸ್.ವಿವೇಕ್ , ರಮೇಶ್, ಕಿಶೋರ್ ಕುಮಾರ್, ಪ್ರಮೋದ್, ಅಭಿಲಾಶ್, ಸೂರಜ್, ಸುಧಾಕರ್, ಸುರಕ್ಷಿತ್, ಕಿಶೋರ್ ನಂಬಿಯಾರ್ , ಸೌರವ್, ಜನಾರ್ದನ ಹಾಗೂ ರವೀಂದ್ರ ಮೊದಲಾದವರು ಉಪಸ್ಥಿತರಿದ್ದರು.
ಅಧ್ಯಕ್ಷ ಸೃಜನ್ ಮಾನವ್ ಸ್ವಾಗತಿಸಿದರು. ಕೆ.ಕೆ.ಪೇಜಾವರ ಕಾರ್ಯಕ್ರಮ ನಿರೂಪಿಸಿದರು.