ಕರಾಟೆಯಲ್ಲಿ ಚಿನ್ನದ ಪದಕ

prajwal kotabhagi
Published on

ಹುಬ್ಬಳ್ಳಿ: ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಧಾರವಾಡ ಹಾಗೂ ಕೆಪಿಇಎಸ್ ಪಪೂ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ವತಿಯಿಂದ ಧಾರವಾಡ ಆರ್.ಎನ್. ಶೆಟ್ಟಿ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಪಿಯು ಕರಾಟೆ ಚಾಂಪಿಯನ್​ಶಿಪ್​ನಲ್ಲಿ ಹುಬ್ಬಳ್ಳಿಯ ಸಮರ್ಥ ಸ್ವತಂತ್ರ ಪಿಯು ಕಾಲೇಜ್ ವಿದ್ಯಾರ್ಥಿ ಪ್ರಜ್ವಲ್ ಕೋಟಬಾಗಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಗಳಿಸಿದ್ದಾನೆ. 78 ಕೆಜಿ ವಿಭಾಗದಲ್ಲಿ ಪ್ರಜ್ವಲ್ ಸ್ಪರ್ಧಿಸಿದ್ದ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net