ಪ್ರಜ್ವಲ್ ಉಮೇಶರೆಡ್ಡಿಗಿಂತ ವಿಕೃತ ವ್ಯಕ್ತಿ

pushpa
Published on

ರಾಯಚೂರು: ಒಂದು ಕಾಲದಲ್ಲಿ ವಿಕೃತ ಕಾಮಿ ಎಂದು ಕುಖ್ಯಾತಿ ಪಡೆದಿದ್ದ ಉಮೇಶರೆಡ್ಡಿಗಿಂತ ಪ್ರಜ್ವಲ್ ರೇವಣ್ಣ ವಿಕೃತ ವ್ಯಕ್ತಿಯಾಗಿದ್ದು, ಸಾವಿರಾರು ಹೆಣ್ಣು ಮಕ್ಕಳ ಜೀವನದ ಜತೆಗೆ ಆಟವಾಡಿದ್ದಾರೆ ಎಂದು ಕಾಂಗ್ರೆಸ್ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಡಾ.ಪುಷ್ಪಾ ಅಮರನಾಥ ಹೇಳಿದರು.
ಸ್ಥಳೀಯ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿ, ಬಿಜೆಪಿ ನಾಯಕರಿಗೆ ಆತನ ಕಾಮದಾಟ ಗೊತ್ತಿದ್ದರೂ ಚುನಾವಣೆಯಲ್ಲಿ ಟಿಕೆಟ್ ನೀಡುವ ಮೂಲಕ ಮಹಿಳೆಯರಿಗೆ ಅನ್ಯಾಯ ಮಾಡಿದ್ದು, ಆತನ ವಿದೇಶಕ್ಕೆ ಪರಾರಿಯಾಗಲು ಬಿಜೆಪಿ ನಾಯಕರು ಬೆಂಬಲ ನೀಡಿದ್ದಾರೆ ಎಂದರು.
ಕಾಂಗ್ರೆಸ್ ಅಕಾರಕ್ಕೆ ಬಂದರೆ ಮಹಿಳೆಯರ ಮಾಂಗಲ್ಯ ಕಿತ್ತುಕೊಳ್ಳಲಾಗುತ್ತದೆ ಎಂದು ಸುಳ್ಳು ಹೇಳುವ ಪ್ರಧಾನಿ ಮೋದಿ 3 ಸಾವಿರ ಹೆಣ್ಣು ಮಕ್ಕಳ ಜೀವನವನ್ನು ಹಾಳು ಮಾಡಿರುವ ಪ್ರಜ್ವಲ್ ಪರ ಹೇಗೆ ಪ್ರಚಾರ ನಡೆಸಿದರು. ಆತನ ಪರಾರಿಯಾಗಲು ಹೇಗೆ ಬಿಟ್ಟರು.
ಪ್ರಜ್ವಲ್ ಪ್ರಕರಣಕ್ಕೆ ಸಂಬಂಸಿದಂತೆ ಬಿಜೆಪಿಯ ಮಹಿಳಾ ಶಾಸಕಿಯರು, ಮುಖಂಡರು ಖಂಡಿಸುತ್ತಿಲ್ಲ. ಹತ್ಯೆಗೊಳಗಾದ ನೇಹಾ ಮತ್ತು ಪ್ರಜ್ವಲ್‌ನಿಂದ ದೌಜನ್ಯಕ್ಕೆ ಒಳಗಾದ ಮಹಿಳೆಯರಿಗೆ ನ್ಯಾಯ ಕೊಡಿಸಲು ಬೀದಿಗಿಳಿದು ಹೋರಾಟ ಮಾಡಲು ಸಿದ್ಧರಿದ್ದೇವೆ. ಬಿಜೆಪಿಯ ಮಹಿಳೆ ಮುಖಂಡರು ಹೋರಾಟಕ್ಕೆ ಸಿದ್ಧರಿದ್ದರಾ.
ದೇಶದಲ್ಲಿ ಪ್ರಧಾನಿ ಮೋದಿ ಅಲೆ ಮರೆಯಾಗಿದೆ. ಕಳೆದ ಎರಡು ಚುನಾವಣೆಗಳಲ್ಲಿ ಮೋದಿ ಅಲೆ ಕಂಡು ಬಂದಿತ್ತು. ಸುಳ್ಳು ಭರವಸೆಗಳಿಂದಾಗಿ ಜನರ ನಂಬಿಕೆ ಕಳೆದುಕೊಂಡಿದ್ದು, ಈ ಬಾರಿ ದೇಶದಲ್ಲಿ ಯಾವುದೇ ಮೋದಿ ಅಲೆಯಿಲ್ಲ. ಜನರ ನೀಡಿದ ಭರವಸೆ ಈಡೇರಿಸಿದ ಕಾಂಗ್ರೆಸ್ ಪರವಾಗಿದ್ದಾರೆ.
ಕಳೆದ ಚುನಾವಣೆಯಲ್ಲಿ ಗೆದ್ದು ಸಂಸದರಾದ 27 ಬಿಜೆಪಿ ಸಂಸದರು ರಾಜ್ಯದ ಪರವಾಗಿ ಹಾಗೂ ಜನರ ಪರವಾಗಿ ಸಂಸತ್‌ನಲ್ಲಿ ಧ್ವನಿ ಎತ್ತಲಿಲ್ಲ. ಅಂತಹವರನ್ನು ಆಯ್ಕೆ ಮಾಡಿದರೆ ರಾಜ್ಯಕ್ಕೆ ಉಳಿಗಾಲವಿಲ್ಲ. ಕಾಂಗ್ರೆಸ್ ಅಭ್ಯರ್ಥಿಗಳಿಗೆ ಬೆಂಬಲಿಸಿ ರಾಜ್ಯದ ಹಿತ ಕಾಪಾಡಬೇಕು ಎಂದು ಡಾ.ಪುಷ್ಪಾ ಅಮರನಾಥ ಹೇಳಿದರು.
ಈ ಸಂದರ್ಭದಲ್ಲಿ ಪಕ್ಷದ ಪದಾಕಾರಿಗಳಾದ ಜಯಲಕ್ಷ್ಮಿ, ಶ್ರೀದೇವಿ ನಾಯಕ, ಶಶಿಕಲಾ ಭೀಮರಾಯ, ಮಂಜುಳಾ ಅಮರೇಶ, ಪದ್ಮಾವತಿ, ಆರತಿ, ನವನೀತಾ ಆದೋನಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net