

ರಾಯಚೂರು ನಗರದ ವಾಲ್ಕಟï ಮೈದಾನದಲ್ಲಿ ಪ್ರಜÁಪೀತ ಬ್ರಹ್ಮ ಕುಮಾರಿ ವಿಶ್ವ ವಿದ್ಯಾಲಯದಿಂದ ೮೯ ನೇ ಮಹಾಶಿವರಾತ್ರಿ ಮಹೋತ್ಸವ ನಾಲ್ಕನೇ ದಿನದ ಕಾರ್ಯಕ್ರಮದಲ್ಲಿ ಸಣ್ಣ ನೀರಾವರಿ ಇಲಾಖೆಯ ಸಚಿವರಾದ ಎನ್.ಎಸ್.ಬೋಸರಾಜು ಅವರು ಶನಿವಾರ ಧಾರ್ಮಿಕ ಪುರಾತತ್ವ, ವೈe್ಞÁನಿಕತೆಯ ಅನೇಕ ಮಾಹಿತಿಯ ಚಿತ್ರಗಳನ್ನು ವೀಕ್ಷಿಸಿದರು.
ನಂತರ ಮಾತನಾಡಿ, ನಮ್ಮ ಕೆಲಸ ಕಾರ್ಯಗಳ ಒತ್ತಡದಿಂದ ಧಾರ್ಮಿಕ ಹಾಗೂ ಸಾಂಸ್ಕೃತಿಕ ನಡೆ-ನುಡಿಯನ್ನು ಮರೆಯುತ್ತಿದ್ದೇವೆ. ಆದರೆ ಪ್ರಜÁಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದಿಂದ ಪ್ರತಿವರ್ಷ ಇಂತಹ ಮಹಾಶಿವರಾತ್ರಿಯ ಶಿವ ಆರಾಧನೆಯ ಧಾರ್ಮಿಕ ಕಾರ್ಯಕ್ರಮಗಳನ್ನ ಆಯೋಜಿಸುವ ಮೂಲಕ ಶಾಂತತೆ, ಯೋಗ, ಧ್ಯಾನ, ಶಿವನ ಆರಾಧನೆಯ ಮಹತ್ವ ತಿಳಿಸುವ ಈ ಕಾರ್ಯ ಶ್ಲಾಘನೀಯವಾಗಿದೆಂದರು.
ನಂತರ ಪ್ರಜÁಪೀತ ಭ್ರಹ್ಮಕುಮಾರಿ ಸಮಾಜದ ಸಂಚಾಲಕಿ ಸ್ಮಿತಾ ಅಕ್ಕಾ ಅವರು ಮಾತನಾಡಿ, ಭೂ ಮಂಡಲದ ಉಗಮ, ಸಕಲ ಜಲಚರಗಳ ಉಗಮ ಬೆಳವಣಿಗೆ ಬಗ್ಗೆ ವಿವರಿಸಿದರು. ಸಮಾಜದಲ್ಲಿ ಎಲ್ಲರ ಒಳ್ಳಿತನ್ನು ಬಯಸದೆ ಶಾಂತಿ ಸಾಧ್ಯವಿಲ್ಲ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಹಿರಿಯರಾದ ಕೆ. ಶಾಂತಪ್ಪ, ಜಯಂತರಾವ್ ಪತಂಗೆ, ರುದ್ರಪ್ಪ ಅಂಗಡಿ, ಅಮರೇಗೌಡ ಹಂಚಿನಾಳ, ನರಸಿಂಹಲು ಮಾಡಗಿರಿ, ಬಸವರಾಜ ಪಾಟೀಲï ಸೇರಿದಂತೆ ಅನೇಕರು ಇದ್ದರು.