ಸಾಧಕಿಯರಿಗೆ ಈಶ್ವರೀಯ ಸನ್ಮಾನ,  ಮಾತೇಶ್ವರಿ ಜಗದಂಬಾ ಸರಸ್ವತಿ ಸ್ಮರಣೆ

IMG_20250624_205059_947-2.jpg
Published on

ಹುಬ್ಬಳ್ಳಿ: ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಪ್ರಥಮ ಮುಖ್ಯ ಆಡಳಿತ ಅಧಿಕಾರಿಣಿ, ರಾಜಯೋಗಿನಿ ಬ್ರಹ್ಮಕುಮಾರಿ ಮಾತೇಶ್ವರಿ ಜಗದಂಬಾ ಸರಸ್ವತಿ ಅವರ 60ನೇ ಪುಣ್ಯಸ್ಮರಣೆ ಅಂಗವಾಗಿ ವಿವಿಧ ಕ್ಷೇತ್ರಗಳ ಮಹಿಳಾ ಶಿರೋಮಣಿಗಳಿಗೆ ನಗರದಲ್ಲಿ ಈಶ್ವರೀಯ ಸನ್ಮಾನ ನೀಡಲಾಯಿತು.

ಇಲ್ಲಿಯ ಜೆ.ಸಿ. ನಗರದ ಬ್ರಹ್ಮಕುಮಾರಿ ಆಶ್ರಮದಲ್ಲಿ ಮಂಗಳವಾರ ಆಯೋಜಿಸಿದ್ದ ಸಮಾರಂಭದಲ್ಲಿ ಸಾಧಕಿಯರಾದ ಪಾಲಿಕೆ ಸದಸ್ಯೆ ಮಂಗಳಮ್ಮ ಗೌರಿ, ಸಹಾಯಕ ಪೋಸ್ಟ್ ಮಾಸ್ಟರ್ ಪಿ.ಎಸ್. ಕುಲಕರ್ಣಿ, ಸಹಾಯಕ ಇಂಜಿನಿಯರ್ ತುಳಸಿ ಗಜಾಕೋಶ, ಎಎಸ್ಐ ಶಕುಂತಲಾ ಅವಾಂದಕರ, ವಕೀಲೆ ಪದ್ಮಜಾ, ಸಿವಿಲ್ ಇಂಜಿನಿಯರ್ ಜಯಲಕ್ಷ್ಮಿ ಹತ್ತಿ, ಪತ್ರಕರ್ತೆ ವಿದ್ಯಾ ಕೊಡ್ಲೆಕೆರೆ, ವೈದ್ಯಕಿಯ ವಿಭಾಗದ ಇಂದುಮತಿ ವೈದ್ಯ, ದೈಹಿಕ ಶಿಕ್ಷಣ ವಿಭಾಗದ ಬಸಮ್ಮ, ಡಾ. ಮೋಹಿನಿ ಅಲಗೂರ, ಸಂಗೀತ ಶಿಕ್ಷಕಿ ರೇಣುಕಾ ಕಗ್ಗಿನಳ್ಳಿ, ವಿದುಷಿ ಭಾಗ್ಯಶ್ರೀ ಗಾಳೆಮ್ಮನವರ ಅವರಿಗೆ ಈಶ್ವರಿಯ ಸನ್ಮಾನ ನೀಡಲಾಯಿತು.

ಮಾಜಿ ಶಾಸಕಿ ಕುಸುಮಾವತಿ ಶಿವಳ್ಳಿ ಕಾರ್ಯಕ್ರಮ ಉದ್ಘಾಟಿಸಿದರು. ವಲಯ ಸಂಚಾಲಕಿ ರಾಜಯೋಗಿನಿ ಬ್ರಹ್ಮಕುಮಾರಿ ನಿರ್ಮಲಾಜಿ ಅಧ್ಯಕ್ಷತೆ ವಹಿಸಿದ್ದರು.
ಖುಷಿ ಸ್ವಾಗತ ನೃತ್ಯ ಪ್ರದರ್ಶಿಸಿದರು. ಬಿ.ಕೆ. ಲತಾ, ಬಿ.ಕೆ. ಮಂಗಳಾ, ಬಿ.ಕೆ. ಸೋಮೇಶ್ವರಿ ಹಾಗೂ ಇತರ ಸಹೋದರಿಯರು, ನೂರಾರು ಜನರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net