ಹೊಸಪೇಟೆಯಲ್ಲಿ ಪ್ರಜಾಧ್ವನಿ ಯಾತ್ರೆ ಉದ್ಘಾಟನೆ

IMG-20230117-WA0024.jpg
Published on

ಹೊಸಪೇಟೆ: ನಗರದ ಡಾ.ಪುನೀತ್ ರಾಜ್ ಕುಮಾರ್ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ಆಯೋಜಿಸಿರುವ ಕಾಂಗ್ರೆಸ್  ಪ್ರಜಾಧ್ವನಿ ಯಾತ್ರೆಯನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್,‌ ರಾಜ್ಯ ಉಸ್ತುವಾರಿ ಸುರ್ಜೇವಾಲಾ, ಹಿರಿಯ ನಾಯಕರಾದ ಈಶ್ವರ ಖಂಡ್ರೆ, ಎಚ್.ಕೆ.ಪಾಟೀಲ್, ಬಸವರಾಜ ರಾಯರೆಡ್ಡಿ, ಅಲ್ಲಂ ವೀರಭದ್ರಪ್ಪ, ಬಿ.ಕೆ. ಹರಿಪ್ರಸಾದ್, ಮಾಜಿ ಸಚಿವ ದಿವಾಕರ ಬಾಬು, ಶಾಸಕ ತುಕಾರಾಂ, ಪಿ.ಟಿ. ಪರಮೇಶ್ವರ ನಾಯ್ಜ, ಭೀಮಾನಾಯ್ಕ, ಗಣೇಶ , ತುಕಾರಾಂ  ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದಾರೆ.‌
ಬಸ್ ಯಾತ್ರೆಗೆ ಅದ್ದೂರಿ ಸ್ವಾಗತ:
ಕಾಂಗ್ರೆಸ್ ನಾಯಕರ ಪ್ರಜಾಧ್ವನಿ ಬಸ್  ಯಾತ್ರೆಯನ್ನು ಹೊಸಪೇಟೆಯಲ್ಲಿ‌ ಅದ್ದೂರಿಯಾಗಿ‌ ಬರ ಮಾಡಿಕೊಳ್ಳಲಾಯಿತು.‌
ನಗರದ ಅಂಬೇಡ್ಕರ್ ಸರ್ಕಲ್ ನಿಂದ ಕ್ರೀಡಾಂಗಣದ‌ ವರೆಗೆ ಮಾರ್ಗದುದ್ದಕ್ಕೂ ಪುಷ್ಪ ವೃಷ್ಠಿಗೈದು ಸ್ವಾಗತ‌ಕೋರಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net