

ಚಿತ್ರದುರ್ಗ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದ ಪ್ರಜಾಧ್ವನಿ ಯಾತ್ರೆಯಲ್ಲಿ ವೈಯಕ್ತಿಕ ಭಾವ ಚಿತ್ರಗಳಿಗಿಂತ ಪಕ್ಷದ ಭಾವುಟಗಳ ಸಂಖ್ಯೆ ಅಧಿಕವಿರಲಿ ಎಂದು ಪಕ್ಷದ ಕಾರ‌್ಯಕರ್ತರಿಗೆ ಕಾಂಗ್ರೆಸ್ ಮುಖಂಡ ಹನುಮಲಿ ಷಣ್ಮುಖಪ್ಪ ಸಲಹೆ ನೀಡಿದರು.
ಚಿತ್ರದುರ್ಗಕ್ಕೆ ಫೆ.9ರಂದು ಆಗಮಿಸುತ್ತಿರುವ ಪ್ರಜಾಧ್ವನಿ ಯಾತ್ರೆ ಹಿನ್ನೆಲೆ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಸಂಜೆ ಏರ್ಪಡಿಸಿ ದ್ದ ಪಕ್ಷದ ನಗರ-ಗ್ರಾಮಾಂತರ ಬ್ಲಾಕ್ ಕಾರ‌್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ,ವ್ಯಕ್ತಿಗಿಂತ ಪಕ್ಷ ಮುಖ್ಯ,ಆದ್ದರಿಂದ ಯಾತ್ರೆ ವೇಳೆ ಪಕ್ಷದ ಭಾವುಟಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ರಾರಾಜಿಸಲಿ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಇಬ್ಬರು ಲಿಂಗಾಯತ ಅಭ್ಯರ್ಥಿಗಳು,ಕಣದಲ್ಲಿ ಇದ್ದಿದ್ದರಿಂದ ಹಾಗೂ ಬಿ.ಎಸ್.ಯಡಿಯೂ ರಪ್ಪ ಅವರನ್ನು ಸಿಎಂ ಮಾಡ ಬೇಕೆಂದು ವೀರಶೈವ-ಲಿಂಗಾಯತರು ತೀರ್ಮಾನಿಸಿದ್ದರಿಂದಾಗಿ ನಾನು ಸೋಲ ಬೇಕಾಯಿತು. ಪ್ರಜಾಧ್ವನಿ ಯಾತ್ರೆಯಲ್ಲಿ ಚಿತ್ರದುರ್ಗದ ಶಕ್ತಿ ಪ್ರದರ್ಶಿಸಬೇಕಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಭೀಮಸಮುದ್ರದ ಜಿ.ಎಸ್.ಮಂಜುನಾಥ್ ಮಾತನಾಡಿ,ನಾನು ಚುನಾವಣೆಯಲ್ಲಿ ಸ್ಫರ್ಧಿಸು ವುದಿಲ್ಲ. ಆದರೆ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುವುದಾಗಿ ಹೇಳಿದರು.
ಡಿಸಿಸಿ ಅಧ್ಯಕ್ಷ ಎಂ.ಕೆ. ತಾಜ್‌ಪೀರ್,ಮಾಜಿ ಶಾಸಕರಾದ ಎಸ್.ಕೆ.ಬಸವರಾಜನ್,ಎ.ವಿ.ಉಮಾಪತಿ, ಗೀತಾನಂದಿನಿಗೌಡ,ಸಂಪತ್ ಕು ಮಾರ್,ಲಕ್ಷ್ಮೀಕಾಂತ್,ಮಂಜಪ್ಪ, ಮೈಲಾರಪ್ಪ,ವೆಂಕಟೇಶ್,ಅಂಜಿನಪ್ಪ,ಬಾಲಕೃಷ್ಣ ಯಾದವ್,ಪ್ರಕಾಶ್,ಎನ್.ಡಿ.ಕುಮಾರ್ ಇತರರು ಇದ್ದರು.