ಶಾಂಪು, ಸೋಪು ಬಳಕೆ ನಿರ್ಬಂಧಕ್ಕೆ ಶ್ಲಾಘನೆ

h11-mallikarjun raddera
Published on

ಹುಬ್ಬಳ್ಳಿ: ನದಿ, ಕೊಳ್ಳ, ಸರೋವರ, ಕಲ್ಯಾಣಿ ಇತ್ಯಾದಿ ಸ್ಥಳಗಳಲ್ಲಿ ಶಾಂಪು, ಸೋಪು ಬಳಕೆ ಮಾಡದಂತೆ ನಿರ್ಬಂಧಿಸಲು ಅರಣ್ಯ ಸಚಿವ ಈಶ್ಚರ ಖಂಡ್ರೆ ಅವರು ಹೊರಡಿಸಿರುವ ಆದೇಶಕ್ಕೆ ಎಲ್ಲೆಡೆಯಿಂದ ಶ್ಲಾಘನೆ ವ್ಯಕ್ತವಾಗುತ್ತಿದೆ.

ಪುಣ್ಯಸ್ನಾನ ಮಾಡಲು ಬರುವ ಭಕ್ತರು, ಶಾಂಪು, ಸೋಪು ಬಳಕೆ ಮಾಡುತ್ತಿದ್ದಾರೆ. ಅರೆಬರೆ ಬಳಸಿ ಅಲ್ಲಿಯೇ ಬಿಸಾಡಿ ಹೋಗುತ್ತಿದ್ದಾರೆ. ಇದರಿಂದ ನೀರಿನಲ್ಲಿ ನೊರೆ ಉಂಟಾಗಿ ಮಲಿನವಾಗುತ್ತಿದೆ. ಜಲಚರಗಳ ಜೀವಕ್ಕೆ ಹಾನಿಯಾಗುತ್ತಿದೆ ಎಂದವರು ಹೇಳಿದ್ದಾರೆ.

ಇದು ಸತ್ಯವೂ ಹೌದು. ವಿಷಮುಕ್ತ ಪುಣ್ಯ ಸ್ನಾನ ಅಭಿಯಾನ ಹಮ್ಮಿಕೊಂಡು ನಾವೀಗಾಗಲೇ ಜಾಗೃತಿ ಮೂಡಿಸಿದ್ದೆವು. 10 ಲಕ್ಷಕ್ಕೂ ಹೆಚ್ಚು ಜನರಿಗೆ ಕಡಲೆ ಹಿಟ್ಟಿನ ಪ್ಯಾಕೆಟ್‌ಗಳನ್ನು ಸಂಕ್ರಮಣದ ವೇಳೆ ವಿತರಿಸಿದ್ದೆವು. ಈಗ ಸರ್ಕಾರವೇ ಈ ಆದೇಶ ಹೊರಡಿಸಿದೆ. ನಮ್ಮ ಅಭಿಯಾನಕ್ಕೊಂದು ಮೆರಗು ಬಂದಿದೆ. ಜನರಿನ್ನು ಜಾಗೃತರಾಗಬೇಕು. ಮುಂದಿನ ನಮ್ಮ ಪೀಳಿಗೆಗೆ ಶುದ್ಧ ನೀರು, ಆಹಾರ, ಗಾಳಿ ಕೊಡಬೇಕು ಎಂದು ವಿಷಮುಕ್ತ ಪುಣ್ಯಸ್ನಾನ ಅಭಿಯಾನ ಅಯೋಜಿಸಿದ್ದ ಹುಬ್ಬಳ್ಳಿಯ ವರದಶ್ರೀ ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ಮಲ್ಲಿಕಾರ್ಜುನ ರಡ್ಡೇರ ಹಾಗೂ ಕಾರ್ಯದರ್ಶಿ ಕೆ.ಎಸ್. ಶಿರಸಂಗಿ ಅವರು ತಿಳಿಸಿದ್ದಾರೆ. ಅಲ್ಲದೆ ದೇವಸ್ಥಾನ, ಪುಣ್ಯಕ್ಷೇತ್ರಗಳ 500 ಮೀಟರ್ ವ್ಯಾಪ್ತಿಯಲ್ಲಿ ಶಾಂಪು, ಸೋಪು ಮಾರಾಟ ನಿರ್ಬಂಧಿಸುವ ಆದೇಶಕ್ಕೆ ಖುಷಿ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net