ಪ್ರಹ್ಲಾದ ಮಾಂಡ್ರೆ, ಲೆಸ್ಸಿ ಶೆಟ್ಟಿ ಪ್ರಥಮ

30 lxr 6
Published on

ಲಕ್ಷ್ಮೇಶ್ವರ: ಪಟ್ಟಣದಲ್ಲಿ ಗದಗ ಜಿಲ್ಲಾ ಚೆಸ್ ಅಸೋಷಿಯೇಷನ್ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ರಾಜ್ಯದ ಮಟ್ಟದ ಮುಕ್ತ ಚೆಸ್ ಪಂದ್ಯಾವಳಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಪಂದ್ಯಾವಳಿಯಲ್ಲಿ ರಾಜ್ಯದ ವಿವಿಧೆಡೆಯಿಂದ ಕ್ರೀಡಾಪಟುಗಳು ಭಾಗವಹಿಸಿದ್ದರು.

ಬಹುಮಾನ ವಿಜೇತರು - 14 ವರ್ಷದೊಳಗಿನ ಬಾಲಕರ ವಿಭಾಗ

ಕಲಬುರ್ಗಿಯ ಅನೀಶ ಸಿ ಮೋರೆ(ಪ್ರಥಮ), ಗದಗನ ದಿಂಗಾಲೇಶ ಚಂಗಳಿ( ದ್ವಿತೀಯ), ಧಾರವಾಡದ ಉಸ್ಮಾನಖಾನ(ತೃತೀಯ).

ಬಾಲಕಿಯರ ವಿಭಾಗ: ಗದಗನ ಸುಭೀಕ್ಷಾ ಚಂಗಳಿ(ಪ್ರಥಮ), ಕಲಬುರ್ಗಿಯ ಲೆಸ್ಸಿ ವಲ್ಲಮಶೆಟ್ಟಿ (ದ್ವಿತೀಯ), ಶಿರಹಟ್ಟಿಯ ಸಹನಾ ಎಂ(ತೃತೀಯ).

17 ವರ್ಷದೊಳಗಿನ ಬಾಲಕರ ವಿಭಾಗ:

ಗದಗನ ನಂದಕುಮಾರ ಸುಳಿಗೇರಿ(ಪ್ರಥಮ), ಕಲಬುರ್ಗಿಯ ಸಯಾನ ಪರಮಾರ(ದ್ವಿತೀಯ), ಹುಬ್ಬಳ್ಳಿಯ ವಿರಾಜ ಕಟ್ಟಿಮನಿ(ತೃತೀಯ).

ಬಾಲಕಿಯ ವಿಭಾಗ

ಧಾರವಾಡದ ಶ್ರಾವಣಿ ನಾಯಕ( ಪ್ರಥಮ), ಗದಗನ ಸಿಂಚನಾ ಕಟ್ಟೆಣ್ಣವರ (ದ್ವಿತೀಯ), ಧಾರವಾಡದ ಅಧ್ವಿಕಾ ಶೆಟ್ಟಿ (ತೃತೀಯ).

ಪುರುಷರ ಮುಕ್ತ ವಿಭಾಗ:

ಗದಗನ ಪ್ರಹ್ಲಾದ ಮಾಂಡ್ರೆ(ಪ್ರಥಮ), ಧಾರವಾಡದ ಶ್ರೀಪಾದ ಕೆ.ವಿ(ದ್ವಿತೀಯ), ಹುಬ್ಬಳ್ಳಿಯ ನಾಗರಾಜ ಕುಲಕರ್ಣಿ(ತೃತೀಯ).

ಮಹಿಳೆಯರ ಮುಕ್ತ ವಿಭಾಗ:

ಹುಬ್ಬಳ್ಳಿಯ ಲೆಸ್ಸಿ ಶೆಟ್ಟಿ(ಪ್ರಥಮ), ಬಳ್ಳಾರಿಯ ಸುಜಾತ ವೈ(ದ್ವಿತೀಯ), ಶಿರಸಿಯ ಪ್ರೀತಿ ಶೆಟ್ಟಿ(ತೃತೀಯ)

ಅತ್ಯಂತ ಹಿರಿಯರ ವಿಭಾಗದಲ್ಲಿ ಶಿರಸಿಯ ರಾಮಚಂದ್ರ ಭಟ್ ಮತ್ತು ಕಿರಿಯರ ವಿಭಾಗದಲ್ಲಿ ಧಾರವಾಡದ ಅನ್ವಿತ ದೇವಿಹೊಸೂರ ಟ್ರೋಫಿ ಮತ್ತು ನಗದು ಬಹುಮಾನ ಸ್ವೀಕರಿಸಿದರು. ಪಟ್ಟಣದ ತಟ್ಟಿ ವಿಕಲಚೇತನ ಶಾಲೆಯ 5 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿ ಗಮನ ಸೆಳೆದರು. ಎಂ.ಕೆ. ಕಳ್ಳಿಮಠ ಪ್ರಶಸ್ತಿ ವಿತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net