ಒಡ್ಡೂರು ಸಿಎನ್‌ಜಿ ಘಟಕಕ್ಕೆ ಪ್ರಲ್ಹಾದ್​ ಜೋಶಿ ಭೇಟಿ

Btw_Prahlad Joshi
Published on

ಬಂಟ್ವಾಳ: ಕೇಂದ್ರ ನವೀಕರಿಸಬಹುದಾದ ಇಂಧನ ಖಾತೆ ಸಚಿವ ಪ್ರಲ್ಹಾದ್​ ಜೋಶಿ ಬಂಟ್ವಾಳ ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು ಅವರ ಒಡ್ಡೂರು ಫಾರ್ಮ್ಸ್ ಬಳಿ ಇರುವ ಸಿಎನ್‌ಜಿ ಘಟಕಕ್ಕೆ ಗುರುವಾರ ಭೇಟಿ ನೀಡಿದರು. ಘಟಕದ ಕಾರ್ಯಚಟುವಟಿಕೆಗಳನ್ನು ವೀಕ್ಷಿಸಿದ ಅವರು ಆತ್ಮನಿರ್ಭರ ಭಾರತ ನಿರ್ಮಾಣಕ್ಕೆ ಇಂತಹ ಪ್ರಯತ್ನಗಳು ಸಹಕಾರಿ ಆಗುತ್ತವೆ ಎಂದರು.

ಶಾಸಕ ರಾಜೇಶ್ ನಾಕ್ ಹಾಗೂ ಉನ್ನತ್ ಆರ್.ನಾಕ್ ಘಟಕದಲ್ಲಿ ಅಟೋಗ್ಯಾಸ್ ಪ್ರಾಯೋಗಿಕ ವಿತರಣೆಗೆ ಅನುಕೂಲ ಕಲ್ಪಿಸಲಾಗಿರುವ ಬಗ್ಗೆ ಮಾಹಿತಿ ನೀಡಿದರು.

ದ.ಕ.ಸಂಸದ ಕ್ಯಾ.ಬ್ರಿಜೇಶ್ ಚೌಟ, ಮಂಗಳೂರು ಉತ್ತರ ಶಾಸಕ ವೈ. ಭರತ್ ಶೆಟ್ಟಿ, ಮಂಗಳೂರು ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ, ಪ್ರಮುಖರಾದ ಸಂಜಯ್ ಪ್ರಭು, ದೇವದಾಸ್ ಶೆಟ್ಟಿ, ಪುರುಷೋತ್ತಮ ಶೆಟ್ಟಿ ವಾಮದಪದವು, ಯತೀಶ್ ಅರ್ವಾರ್, ಸಚಿನ್ ಅಡಪ, ಪವನ್ ಕುಮಾರ್, ರವೀಶ್ ಕಾಮತ್, ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net