Pragati Vidyalaya : ಪ್ರಗತಿ ವಿದ್ಯಾಲಯ ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ

Sports Achivers
Published on

ಕುಮಟಾ: ಪಟ್ಟಣದ ಮಣಕಿ ಮಹಾತ್ಮಗಾಂಧಿ ಮೈದಾನದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ತಾಲೂಕು ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟದಲ್ಲಿ ಮೂರೂರು-ಕಲ್ಲಬ್ಬೆ ಪ್ರಗತಿ ವಿದ್ಯಾಲಯ Pragati Vidyalaya ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆಗೈದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ರುಚಿ ಮೋಹನ ನಾಯ್ಕ ಗುಂಡು ಎಸೆತ ಹಾಗೂ ಚಕ್ರ ಎಸೆದಲ್ಲಿ ಪ್ರಥಮ ಸ್ಥಾನ ಪಡೆದು ವೈಯಕ್ತಿಕ ವೀರಾಗ್ರಣಿ ಪಡೆದಿದ್ದಾಳೆ. ರಮ್ಯಾ ಸುರೇಶ ಹೆಗಡೆ ಭರ್ಚಿ ಎಸೆತ ಪ್ರಥಮ ಸ್ಥಾನ, ನಮ್ರತಾ ದೇಶ ಭಂಡಾರಿ 800 ಮೀಟರ್ ಓಟ ಪ್ರಥಮ, ಸಹನಾ ಭಟ್ಟ ಚಕ್ರ ಎಸೆತದಲ್ಲಿ ದ್ವಿತೀಯ, ಅರ್ಪಿತಾ ಮಂಜುನಾಥ ಗೌಡ ಉದ್ದ ಜಿಗಿತದಲ್ಲಿ ದ್ವಿತೀಯ ಸ್ಥಾನ, ಕೆ.ಡಿ. ಧ್ರುವ ಭರ್ಚಿ ಎಸೆತದಲ್ಲಿ ದ್ವಿತೀಯ, ವಿದ್ಯಾರ್ಥಿನಿಯರ ಥ್ರೋಬಾಲ್ ತಂಡ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಬಾಲಕಿಯರ ವಾಲಿಬಾಲ್ ದ್ವಿತೀಯ ಸ್ಥಾನ ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net