ಪ್ರಗತಿ ಪಥದಲ್ಲಿ ಕೆಎಲ್‌ಪಿ ಸೊಸೈಟಿ

14
ಅಥಣಿಯ ಕೆಎಲ್‌ಪಿ ಸೊಸೈಟಿಯಲ್ಲಿ ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು. ಬಂಡು ಜಾಧವ, ಶರದ ಭೋಸಲೆ, ರಾಮ ಚವ್ಹಾಣ, ಕಿರಣ ಬಾಬರ ಇತರರಿದ್ದರು.
Published on

ಸಂಬರಗಿ: ಕೆಎಲ್‌ಪಿ ಮಲ್ಟಿಸ್ಟೇಟ್ ಕೋ-ಆಪರೇಟಿವ್ ಸೊಸೈಟಿ ಪ್ರಗತಿ ಪಥದಲ್ಲಿ ಮುನ್ನಡೆಯುತ್ತಿದೆ ಎಂದು ಪಿಕೆಪಿಎಸ್ ನಿರ್ದೇಶಕ ಬಂಡು ಜಾಧವ ಹೇಳಿದರು.

ಅಥಣಿ ಪಟ್ಟಣದ ಸೊಲ್ಲಾಪುರ ಕೆಎಲ್‌ಪಿ ಮಲ್ಟಿಸ್ಟೇಟ್ ಕೋ-ಆಪರೇಟಿವ್ ಸೊಸೈಟಿ ಶಾಖೆಯಲ್ಲಿ ಮಂಗಳವಾರ 2024ರ ವರ್ಷದ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿದರು.

ಕೆಎಲ್ಪಿ ಸಂಸ್ಥೆ ಅಧ್ಯಕ್ಷ ಅನಿಲ ಇಂಗಲಿ ನೇತೃತ್ವದಲ್ಲಿ ಒಟ್ಟು 43 ಶಾಖೆ ಆರಂಭಿಸಲಾಗಿದೆ. ಸಂಘದ ಸಾಲಗಾರರು ಸಕಾಲಕ್ಕೆ ಸಾಲ ಮರುಪಾವತಿ ಮಾಡುತ್ತಿದ್ದಾರೆ. ಹೀಗಾಗಿ ಸಂಸ್ಥೆ ನಿರಂತರವಾಗಿ ಪ್ರಗತಿಯಲ್ಲಿದೆ ಎಂದರು.

ಶಾಖಾ ಪ್ರಬಂಧಕ ಶರದ ಭೋಸಲೆ, ರಾಮ ಚವ್ಹಾಣ, ಕಿರಣ ಬಾಬರ, ಭೀಮಪ್ಪ ಪಾರ್ಥನಹಳ್ಳಿ, ಪ್ರಶಾಂತ ಐಹೊಳೆ, ಸ್ವಪ್ನಿಲ್ ಜಾಧವ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net