ಜಿಲ್ಲಾಮಟ್ಟದ ಕುಸ್ತಿಗೆ ಪ್ರಗತಿ ಪ್ರೌಢಶಾಲೆ ವಿದ್ಯಾರ್ಥಿಗಳು ಆಯ್ಕೆ

Untitled-1
ಕುಸ್ತಿ ಪಂದ್ಯಾವಳಿಯಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ದೇವನಹಳ್ಳಿ ತಾಲೂಕಿನ ವಿಜಯಪುರದ ಪ್ರಗತಿ ಪ್ರೌಢಶಾಲೆಯ ವಿದ್ಯಾರ್ಥಿಗಳನ್ನು ಆಡಳಿತ ಮಂಡಳಿ ಅವರು ಪ್ರಮಾಣ ಪತ್ರ ನೀಡಿ ಸನ್ಮಾನಿಸಿದರು.
Published on

ವಿಜಯಪುರ: ದೇವನಹಳ್ಳಿ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಪ್ರೌಢಶಾಲಾ ವಿಭಾಗದ ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ವಿಜಯಪುರದ ಪ್ರಗತಿ ಪ್ರೌಢಶಾಲೆ ವಿದ್ಯಾರ್ಥಿಗಳು ಜಿಲ್ಲಾ ಹಂತಕ್ಕೆ ಆಯ್ಕೆಯಾಗಿದ್ದಾರೆ. ಬಾಲಕರ ತಂಡದಲ್ಲಿ 92 ಕೆಜಿ ವಿಭಾಗದಲ್ಲಿ ಇಸ್ಮಾಯಿಲ್​ ಖಾನ್​, 65 ಕೆಜಿ ವಿಭಾಗದಲ್ಲಿ ನಿಶಾಂತ್​ ಬಿ.ರಾಜ್​, 60 ಕೆಜಿ ವಿಭಾಗದಲ್ಲಿ ಪವನ್​ ಕುಮಾರ್​, 48 ಕೆಜಿ ವಿಭಾಗದಲ್ಲಿ ಶರಣ್​ ರಾಜ್​, 46 ಕೆಜಿ ವಿಭಾಗದಲ್ಲಿ ಹುಸೇನ್​, 51 ಕೆಜಿ ವಿಭಾಗದಲ್ಲಿ ಕೇಶವ ಪ್ರಸಾದ್​, 43 ಕೆಜಿ ವಿಭಾಗದಲ್ಲಿ ಪಿ.ಆರ್​.ರಂಜಿತ್​, 71 ಕೆಜಿ ವಿಭಾಗದಲ್ಲಿ ಲಿತೀಶ್​, ಹಾಗೂ ಬಾಲಕಿಯರ ತಂಡದಲ್ಲಿ ಎಸ್​.ಪಾವನಿ 65 ಕೆಜಿ, ಪಿ.ಆರ್​.ಸಹನಾ 43 ಕೆಜಿ ವಿಭಾಗದಲ್ಲಿ ಪ್ರಥಮ ಸ್ಥಾನಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿಜೇತರಾದ ವಿದ್ಯಾರ್ಥಿಗಳನ್ನು ಪ್ರಗತಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎಂ.ಸತೀಶ್​ ಕುಮಾರ್​, ವ್ಯವಸ್ಥಾಪಕ ನಿರ್ದೇಶಕ ಎಸ್​.ಕೃಪಾಶಂಕರ್​, ಆಡಳಿತ ಅಧಿಕಾರಿ ರಜತ ಪಟೇಲ್​, ಮುಖ್ಯಶಿಕ್ಷಕ ವಿ.ಬಸವರಾಜು, ಶಿಕ್ಷಕರು ಸನ್ಮಾನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net