

ಹಾರೂಗೇರಿ: ಜಿನೈಕ್ಯ ಭಗವಂತಪ್ಪ ಕರ್ಣವಾಡಿಯವರು ನಿರ್ಮಿಸಿರುವ ಜನತಾ ಶಿಕ್ಷಣ ಸಂಸ್ಥೆಯ ಪ್ರಗತಿ ಪ್ರೌಢಶಾಲೆಯು ಮಾದರಿಯಾಗಿದೆ ಎಂದು ಗುರುದೇವ ಬ್ರಹ್ಮಾನಂದ ಆಶ್ರಮ ಪರಮಾನಂದವಾಡಿಯ ಡಾ.ಅಭಿನವ ಬ್ರಹ್ಮಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು.
ಪಟ್ಟಣದ ಜನತಾ ಶಿಕ್ಷಣ ಸಂಸ್ಥೆಯ ಕನ್ನಡ ಮಾಧ್ಯಮ ಪ್ರಾಥಮಿಕ, ಪ್ರೌಢಶಾಲೆ, ಭಗವಾನ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆ ಹಾಗೂ ಶಾಂತಲಾ ಸಂಗೀತ ಮಹಾವಿದ್ಯಾಲಯಗಳ ಸಂಯುಕ್ತಾಶ್ರಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ 2024-25ನೇ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ 10ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.
ನರಗುಂದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ನಿಲಯ ಪಾಲಕ ಪ್ರಭಾಕರ ಉಳ್ಳಾಗಡ್ಡಿ ಮಾತನಾಡಿದರು. ಕಳೆದ ಸಾಲಿನ ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಲಾಯಿತು. ಸಂಸ್ಥೆ ಅಧ್ಯಕ್ಷ ಭೀಮಗೌಡ ಕರ್ಣವಾಡಿ, ಸಿಆರ್‌ಪಿ ಮಹಾಂತೇಶ ಮುಗಳಖೋಡ, ಅನಂತ ಕರ್ಣವಾಡಿ, ಭೀಮಗೊಂಡ ಕರ್ಣವಾಡಿ, ಬಿ.ಎನ್.ಆಲಗೂರ, ಡಿ.ಎಸ್.ಡಿಗ್ರಿಜ್, ಎ.ಜೆ.ಚೌಗಲಾ, ಟಿ.ಬಿ.ಸಾಜನೆ, ಸುಭಾಷ, ಸುನೀಲ ಕುಲಕರ್ಣಿ ಇತರರಿದ್ದರು. ಎ.ಬಿ.ಕಿಲ್ಲೇದಾರ ಸ್ವಾಗತಿಸಿದರು. ನೇಹಾ ಖನದಾಳ ಮತ್ತು ಲಾವಣ್ಯ ಮೂಳೆ ನಿರೂಪಿಸಿದರು.