ಸೌರ ವಿದ್ಯುತ್ ಉತ್ಪಾದನೆಗೆ ಕುಸುಮ್ ಯೋಜನೆ

Image96
Published on

ಚಿಕ್ಕಬಳ್ಳಾಪುರ: ಸೌರ ವಿದ್ಯುತ್ ಉತ್ಪಾದನೆ, ಪೂರೈಕೆಯ ಕುಸುಮ್ ಯೋಜನೆ ಅನುಷ್ಠಾನಕ್ಕೆ ಜಿಲ್ಲೆಯಲ್ಲಿ ಅಗತ್ಯವಿರುವ 870.5 ಎಕರೆ ಜಮೀನು ಪೈಕಿ 197.5 ಎಕರೆ ಜಮೀನು ಮಾತ್ರ ಮಂಜೂರಾಗಿದೆ. ಈ ಭಾಗದಲ್ಲಿ ಸೌರ ವಿದ್ಯುತ್ ಉತ್ಪಾದನಾ ಟಕಗಳಲ್ಲಿ 174.1 ಮೆಗಾ ವ್ಯಾಟ್ ಉತ್ಪಾದನೆ ಗುರಿ ಹೊಂದಲಾಗಿದೆ. ಈ ನಿಟ್ಟಿನಲ್ಲಿ ರೈತರ ಜಮೀನುಗಳಲ್ಲಿ ರ್ಘಟಕಗಳನ್ನು ಸ್ಥಾಪಿಸುವ ಪ್ರಕ್ರಿಯೆಯು ನಡೆಯುತ್ತಿದೆ. ಇದರ ನಡುವೆ ಭೂ ಸ್ವಾಧಿನದಲ್ಲಿ ಪ್ರಗತಿ ಕಾಣುತ್ತಿಲ್ಲ. ಪ್ರಸ್ತುತ 8069 ಎಕರೆ ಜಮೀನನ್ನು ಗುರುತಿಸಿದ್ದು ಈ ಪೈಕಿ ಅಗತ್ಯ 870 ಎಕರೆಯಲ್ಲಿ 197.5 ಎಕರೆ ಮಂಜೂರಾಗಿದ್ದು ಇನ್ನು 688 ಎಕರೆ ಮಂಜೂರಾತಿಯು ಬಾಕಿ ಇದೆ.

*ಕುಸುಮ್ ನೋಂದಣಿ

ಕುಸುಮ್ ಬಿ ಯೋಜನೆಯಡಿ 24 ರೈತರು ಸ್ವಯಂ ನೋಂದಾಯಿಸಿಕೊAಡ ಪಂಪ್ ಸೆಟ್ ಗಳ ಸಂಖ್ಯೆ 24. 500 ಮೀ ಮೇಲ್ಪಟ್ಟು ಅಂತರದಲ್ಲಿರುವ ಸಕ್ರಮೀಕರಣಗೊಂಡ ಪಂಪ್ ಸೆಟ್ ಗಳು 37. ಸೌರ ಮಿತ್ರ ತಂತ್ರಾAಶದಲ್ಲಿ ನೋಂದಣಿಯಾದ 45 ಪಂಪ್ ಸೆಟ್ ಗಳ ಸೌರ ವಿದ್ಯುತ್ ಸಂಪರ್ಕಕ್ಕೆ 10,76,075 ರೂ ಠೇವಣಿ ಮೊತ್ತವನ್ನು ಬೆಸ್ಕಾಂಗೆ ಕೆಆರ್ಇಡಿಇಎಲ್ ವರ್ಗಾಯಿಸಿದೆ.

*ಕುಸುಮ್ ಬಿ ಯೋಜನೆ

ರಾಜ್ಯದಲ್ಲಿ ಸೌರಶಕ್ತಿ ಬಳಕೆ ಹೆಚ್ಚಿಸುವ ನಿಟ್ಟಿನಲ್ಲಿ ಕುಸುಮ್ ಬಿ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಇದರಡಿ ರೈತರಿಗೆ ಸಬ್ಸಿಡಿ ದರದಲ್ಲಿ (ಶೇ.80 ರಷ್ಟು) ಸೋಲಾರ್ ಪಂಪ್ ಸೆಟ್ ಅಳವಡಿಸಿಕೊಳ್ಳುವ ಸೌಲಭ್ಯ ಒದಗಿಸುತ್ತಿದ್ದು ಇದರ ಮೂಲಕ ಜಲ ವಿದ್ಯುತ್ ಮೇಲಿನ ಆವಲಂಬನೆಯನ್ನು ಕಡಿಮೆಗೊಳಿಸಲಾಗುತ್ತದೆ. ಸೌರ ಪಂಪ್ ಸೆಟ್ ಗಳ ಸ್ಥಾಪನೆ ಸುಲಭ ಹಾಗೂ ಧೀರ್ಘಕಾಲಿಕ ಬಾಳಿಕೆ ಬರುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net