ಅಮ್ಟಾಡಿ ದೈವಸ್ಥಾನದಲ್ಲಿ ಪ್ರಧಾನ ಹೋಮ: ಕ್ಷೇತ್ರಕ್ಕೆ ಮೂಲಭಂಡಾರ ತರುವ ಬಗ್ಗೆ ವಿಶೇಷ ಪ್ರಾರ್ಥನೆ

10
Published on

ಬಂಟ್ವಾಳ: ಅಮ್ಟಾಡಿ ಗ್ರಾಮದ ಶ್ರೀ ಮಂಗ್ಲಿಮಾರ್ ಅಣ್ಣಪ್ಪ ಸ್ವಾಮಿ, ಧೂಮಾವತಿ ಬಂಟ ಪರಿವಾರ ದೈವಗಳ ದೈವಸ್ಥಾನದಲ್ಲಿ ಮಂಗಳವಾರ ಪ್ರಧಾನ ಹೋಮ, ನವಕಲಶಾಭಿಷೇಕ ಹಾಗೂ ಕ್ಷೇತ್ರಕ್ಕೆ ಮೂಲಭಂಡಾರ ತರುವ ಬಗ್ಗೆ ವಿಶೇಷ ಪ್ರಾರ್ಥನೆ ನಡೆಯಿತು.

ಮಾಜಿ ಸಚಿವ ಬಿ.ರಮಾನಾಥ ರೈ, ಯಕ್ಷ ಧ್ರುವ ಪಟ್ಲ ಫೌಂಡೇಷನ್‌ನ ಸ್ಥಾಪಕಾಧ್ಯಕ್ಷ ಸತೀಶ್ ಶೆಟ್ಟಿ ಪಟ್ಲ ಮಾತನಾಡಿದರು. ಆಡಳಿತ ಮೊಕ್ತೇಸರ ರವಿಶಂಕರ್ ಶೆಟ್ಟಿ ಬಡಾಜೆಗುತ್ತು ದೈವದ ಮೂಲಭಂಡಾರ ತರುವ ವಿಚಾರವನ್ನು ಸಭೆಯ ಮುಂದೆ ಪ್ರಸ್ತಾಪಿಸಿದರು.

ಕಿಯೋನಿಕ್ಸ್ ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಗೇರು ನಿಗಮದ ಅಧ್ಯಕ್ಷೆ ಮಮತಾ ಡಿ.ಎಸ್.ಗಟ್ಟಿ, ಬಂಟ್ವಾಳ ತಾಲೂಕು ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ವಕೀಲ ಅಶ್ವನಿ ಕುಮಾರ್ ರೈ ಮಾತನಾಡಿದರು.

ಶಾಸಕ ರಾಜೇಶ್ ನೈಾಕ್ ಹಾಗೂ ದ.ಕ. ನಿಕಟಪೂರ್ವ ಸಂಸದ ಭೇಟಿ ನೀಡಿದರು. ತಡ್ಯಲ್ ಗುತ್ತಿನ ರಾಕೇಶ್ ಮಲ್ಲಿ, ಸುಕುಮಾರ್ ಶೆಟ್ಟಿ, ಬೂಡ ಅಧ್ಯಕ್ಷ ಬೇಬಿ ಕುಂದರ್, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ದೇವಪ್ಪ ಕುಲಾಲ್ ಪಂಜಿಕಲ್ಲು, ಪ್ರಮುಖರಾದ ಸರಪಾಡಿ ಅಶೋಕ್ ಶೆಟ್ಟಿ, ರಘುನಾಥ ಸೋಮಯಾಜಿ, ಬುಡಿಯಾರು ರಾಧಾಕೃಷ್ಣ ರೈ, ರಾಜಶೇಖರ ರೈ ಕಳ್ಳಿಗೆ, ಲೋಕನಾಥ ಶೆಟ್ಟಿ, ಸತೀಶ್ ಭಂಡಾರಿ, ವಿಶ್ವಾಸ್‌ದಾಸ್, ಸುರೇಶ್ಚಂದ್ರ ಶೆಟ್ಟಿ, ರಾಮಕೃಷ್ಣ ಆಳ್ವ, ಪದ್ಮಶೇಖರ್ ಜೈನ್, ಬಾಲಕೃಷ್ಣ ಅಂಚನ್, ದಿನೇಶ್ ಕುಂಪಲ, ಬೃಜೇಶ್ ಬಾಳ್ತಿಲ ಬೀಡು, ಜಯಂತ್ ಶೆಟ್ಟಿ, ರವಿರಾಜ್ ಶೆಟ್ಟಿ, ಅರುಣ್ ಶೆಟ್ಟಿ, ದಯಾನಂದ ಶೆಟ್ಟಿ, ಮಲ್ಲಿಕಾ ಶೆಟ್ಟಿ, ಪದ್ಮನಾಭ ರೈ, ಚಂದ್ರಹಾಸ ಶೆಟ್ಟಿ, ದೇವದಾಸ್ ಶೆಟ್ಟಿ, ಜಗದೀಶ್ ಕುಂದರ್, ಪ್ರವೀಣ್ ಭಂಡಾರಿ, ಪ್ರಮೋದ್ ಬಳ್ಳಾಲ್ ಬಾಗ್, ಯೋಗಿಶ್ ಶೆಟ್ಟಿ ಜೆಪ್ಪು, ಸುಪ್ರೀತ್ ಆಳ್ವ, ನಂದರಾಮ ರೈ ಬೆಳ್ಳೂರು ಮತ್ತಿತರು ಉಪಸ್ಥಿತರಿದ್ದರು. ದೈವತಾರಾಧನಾ ಸಮಿತಿ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ ಸ್ವಾಗತಿಸಿದರು. ಲೋಕೇಶ್ ಸುವರ್ಣ ಕಿನ್ನಿಬೆಟ್ಟು ನಿರೂಪಿಸಿದರು.

ಸಾಧಕರಿಗೆ ಅಭಿನಂದನೆ

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಾಜೇಂದ್ರ ಶೆಟ್ಟಿ, ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ರವೀಂದ್ರ ಕಂಬಳಿ ಅವರನ್ನು ಅಭಿನಂದಿಸಲಾಯಿತು. ದೈವತಾರಾಧನೆ ಸಮಿತಿಯ ವತಿಯಿಂದ ರಾಜ್ಯ ಧಾರ್ಮಿಕ ಪರಿಷತ್‌ನ ವಿಶೇಷ ಆಹ್ವಾನಿತ ಸದಸ್ಯರಾಗಿ ಆಯ್ಕೆಯಾದ ರವಿಶಂಕರ್ ಶೆಟ್ಟಿ ಅವರನ್ನು ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net