

ಗೋಕಾಕ: ನವದೆಹಲಿಯಲ್ಲಿ ನಡೆದ ದಿ.ಶುಗರ್ ಟೆಕ್ನೋಲಾಜಿಸ್ಟ್ ಅಸೋಸಿಯೇಷನ್ ಆ್ ಇಂಡಿಯಾ ಸಂಸ್ಥೆಯ 83ನೇ ವಾರ್ಷಿಕ ಸಮಾವೇಶದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಷ್ಟ್ರೀಯ ಸಹಕಾರಿ ಸಕ್ಕರೆ ಕಾರ್ಖಾನೆಗಳ ಒಕ್ಕೂಟದ ಅಧ್ಯ ಹರ್ಷವರ್ಧನ ಪಾಟೀಲ ಅವರು ಗೋಕಾಕ ತಾಲೂಕಿನ ಹುಣಶ್ಯಾಳ ಪಿ.ಜಿ. ಗ್ರಾಮದ ಸತೀಶ ಸಮೂಹ ಸಂಸ್ಥೆ ಚೇರ್ಮನ್, ಸಿಎ್ಒ ಪ್ರದಿಪಕುಮಾರ ಇಂಡಿ ಅವರಿಗೆ ಶುಕ್ರವಾರ 2025ನೇ ಸಾಲಿನ ರಾಷ್ಟ್ರಮಟ್ಟದ ಉದ್ಯಮ ಶ್ರೇಷ್ಠ ಪ್ರಶಸ್ತಿ ಪ್ರದಾನ ಮಾಡಿದರು.
ಸತೀಶ ಶುಗರ್ಸ್ ಮತ್ತು ಬೆಳಗಾಂ ಶುಗರ್ಸ್ ಕಾರ್ಖಾನೆಗಳ ಸಕ್ಕರೆ ಟಕ, ಸಹ&ವಿದ್ಯುತ್, ಎಥೆನಾಲ್, ಕಂಪ್ರೇಸ್ಡ್ ಬಯೋ ಗ್ಯಾಸ್ (ಸಿಬಿಜಿ) ಮತ್ತು ಸ್ಟೀಲ್ ಟಿಎಂಟಿ ಬಾರ್ ಉತ್ಪಾದನಾ ಟಕಗಳ ಉತ್ತಮ ಕಾರ್ಯನಿರ್ವಹಣೆ, ಪೂರ್ಣ ಪ್ರಮಾಣದ ಸಾಮರ್ಥ್ಯದ ಬಳಕೆ ಹಾಗೂ ದತೆ ಮತ್ತು ಕಾರ್ಯಮತೆ ಪರಿಗಣಿಸಿ ಪ್ರಶಸ್ತಿ ಈ ನೀಡಿದೆ.
ಸಂಸ್ಥೆಯ ಸಂಸ್ಥಾಪಕ ಅಧ್ಯ, ಸಚಿವ ಸತೀಶ ಜಾರಕಿಹೊಳಿ ಮಾರ್ಗದರ್ಶನದಲ್ಲಿ ಕಾರ್ಖಾನೆ ಪ್ರಗತಿ ಪಥದಲ್ಲಿ ಸಾಗಿದೆ. ಸಿಎ್ಒ ಪ್ರದಿಪಕುಮಾರ ಇಂಡಿ ಮುಂದಾಳತ್ವದಲ್ಲಿ ಆಡಳಿತ ಮಂಡಳಿ ರ್ನಿಣಯ, ರೈತರ ಸಹಕಾರ, ಅಧಿಕಾರಿಗಳು ಹಾಗೂ ಕಾರ್ಮಿಕರ ಪರಿಶ್ರಮ ಲವಾಗಿ ಅತ್ಯುನ್ನತ ಪ್ರಶಸ್ತಿ ಸಂದಿದೆ.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪ್ರದಿಪಕುಮಾರ ಇಂಡಿ, ಸಾಧನೆಗೆ ಸಿಬ್ಬಂದಿ ವರ್ಗದ ಶ್ರದ್ಧೆ ಮತ್ತು ಶ್ರಮ ಶ್ಲಾನೀಯ ಎಂದರು. ಅಸೋಸಿಯೇಷನ್ ಅಧ್ಯ ಸಂಜಯ ಅವಸ್ತಿ ಹಾಗೂ ಗಣ್ಯರು ಪಾಲ್ಗೊಂಡಿದ್ದರು.