

ನರಗುಂದ: ಭಾರತದ ಚಂದ್ರಯಾನ-3ರ ಪ್ರಾಜೆಕ್ಟ್‌ನಲ್ಲಿ ಸಹಾಯಕ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸಿರುವ ಪಟ್ಟಣದ ರೇಖಾ ಕೊಳ್ಳಿಯವರ ಹಾಗೂ ಅವರ ಭಾವಿ ಪತಿ ಗುರುರಾಜ ಪಾಟೀಲ, ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಲ್ಲಿ ಎಂಇಡಿನಲ್ಲಿ ಪ್ರಥಮ ರ‌್ಯಾಂಕ್‌ನೊಂದಿಗೆ ಚಿನ್ನದ ಪದಕಗಳನ್ನು ಪಡೆದಿರುವ ಉಮಾ ವಿ. ಕೊಳ್ಳಿಯವರ ಹಾಗೂ ದಾವಣಗೇರಿ ವಿಶ್ವ ವಿದ್ಯಾಲಯದಿಂದ ಪಿಎಚ್‌ಡಿ ಪದವಿ ಪಡೆದಿರುವ ಅವರ ಪತಿ ಎಸ್.ಎಸ್.ಭೂಮಣ್ಣವರ ಅವರನ್ನು ಪಟ್ಟಣದ ಶ್ರೀಬಸವೇಶ್ವರ ಸಮುದಾಯ ಭವನದಲ್ಲಿ ಬಸವ ಕೇಂದ್ರ, ಶ್ರೀಮುರುಘ ರಾಜೇಂದ್ರ ಫ್ರೀ ಬೋರ್ಡಿಂಗ್ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು.
ಶರಣ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಚನ್ನಬಸಪ್ಪ ಕಂಠಿ, ಚಂಬಣ್ಣ ಕೋರಿ, ಜಿ.ಟಿ. ಗುಡಿಸಾಗರ, ರಮೇಶಗೌಡ ಕರಕನಗೌಡ್ರ, ವಿ.ಎನ್. ಕೊಳ್ಳಿಯವರ, ಡಾ.ಸಂಗಮೇಶ ಕೊಳ್ಳಿಯವರ, ಶಿಮಣ್ಣ ಗೋವೇಶ್ವರ, ಎಸ್.ವೈ.ಹುಂಬಿ, ಎಂ.ಎಸ್.ಯಾವಗಲ್‌ಲ್, ಸಿ.ಎಸ್.ಸಾಲೂಟಗಿಮಠ, ಪತ್ರೆಪ್ಪ ಹಡಪದ, ಜಯಪ್ರಕಾಶ ಕಂಠಿ, ಉಪಸ್ಥಿತರಿದ್ದರು.