ಯೋಗಾಭ್ಯಾಸದಿಂದ ಆರೋಗ್ಯ ಉತ್ತಮ

kdr yoga
ಮಚ್ಚೇರಿಯಲ್ಲಿ ಯೋಗ ಸ್ಪರ್ಧೆ ತೀರ್ಪುಗಾರರ ಪುನಶ್ಚೇತನ ಶಿಬಿರವನ್ನು ಜಿಲ್ಲಾ ಯೋಗ ಅಸೋಸಿಯೇಷನ್ ಅಧ್ಯಕ್ಷ ಬೆಂಕಿ ಶೇಖರಪ್ಪ ಉದ್ಘಾಟಿಸಿದರು. ಬಿ.ಎಂ.ಗಿರೀಶ್, ಜಿ.ಎನ್.ಕೃಷ್ಣಮೂರ್ತಿ, ಪ್ರಭು, ವಿಜಯಾ ಇತರರಿದ್ದರು.
Published on

ಕಡೂರು: ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಯೋಗ ಸಹಕಾರಿ ಎಂದು ಜಿಲ್ಲಾ ಯೋಗ ಅಸೋಸಿಯೇಷನ್ ಅಧ್ಯಕ್ಷ ಬೆಂಕಿ ಶೇಖರಪ್ಪ ಹೇಳಿದರು.

ಮಚ್ಚೇರಿಯಲ್ಲಿ ಶನಿವಾರ ರಾಘವೇಂದ್ರ ಯೋಗ ಅಸೋಸಿಯೇಷನ್ ಆಯೋಜಿಸಿದ್ದ ತೀರ್ಪುಗಾರರ ಪುನಶ್ಚೇತನ ಶಿಬಿರ ಉದ್ಘಾಟಿಸಿ ಮಾತನಾಡಿ, ಯೋಗಕ್ಕೆ ಅಂತಾರಾಷ್ಟ್ರೀಯ ಮಾನ್ಯತೆ ದೊರೆತಿದೆ. ಒತ್ತಡ ಮುಕ್ತವಾಗಲು ಯೋಗ ಸಹಕಾರಿ. ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಪೂರಕವಾಗಿದೆ. ಭಾರತ ವಿಶ್ವಕ್ಕೆ ನೀಡಿರುವ ಯೋಗ ವಿದ್ಯೆಯನ್ನು ಪ್ರತಿಯೊಬ್ಬರೂ ಅಭ್ಯಾಸ ಮಾಡಬೇಕಿದೆ ಎಂದರು.
ರಾಜ್ಯ ಅಮೆಚೂರ್ ಯೋಗ ಕ್ರೀಡಾ ಅಸೋಸಿಯೇಷನ್ ಉಪಾಧ್ಯಕ್ಷ ಬಿ.ಎಂ.ಗಿರೀಶ್ ಮಾತನಾಡಿ, 25 ವರ್ಷಗಳಿಂದ ಯೋಗ ತರಬೇತಿ ನೀಡಲಾಗುತ್ತಿದೆ. ತರಬೇತಿ ಪಡೆದವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿದ್ದಾರೆ. ತೀರ್ಪುಗಾರರಿಗೆ ಯೋಗದ ಸೂಕ್ಷ್ಮಗಳನ್ನು ತಿಳಿಸಿಕೊಡಲಾಗುವುದು. 120 ಶಿಬಿರಾರ್ಥಿಗಳಿದ್ದು, 60 ರೆಫ್ರಿಗಳು ಪರೀಕ್ಷೆ ಎದುರಿಸಲಿದ್ದಾರೆ. ಅದರಲ್ಲಿ ತೇರ್ಗಡೆ ಯಾದವರಿಗೆ ಪ್ರಮಾಣ ಪತ್ರ ವಿತರಿಸಲಾಗುವುದು ಎಂದು ತಿಳಿಸಿದರು.
ರಾಜ್ಯ ಅಮೆಚೂರ್ ಯೋಗ ಕ್ರೀಡಾ ಅಸೋಸಿಯೇಷನ್ ಅಧ್ಯಕ್ಷ ಜಿ.ಎನ್.ಕೃಷ್ಣಮೂರ್ತಿ, ಕಾರ್ಯದರ್ಶಿ ಕೆ.ಪ್ರಭು, ಜಂಟಿ ಕಾರ್ಯದರ್ಶಿ ಎ.ನಟರಾಜ್, ಖಜಾಂಚಿ ಪಿ.ಆರ್.ಕೃಷ್ಣಮೂರ್ತಿ, ಸಂಜೀವ್‌ಕುಮಾರ್ ಹಡಗಲಿ, ವಿಜಯಲಕ್ಷ್ಮೀ ಶೇಖರಪ್ಪ, ಯೋಗಕೇಂದ್ರದ ಶಿಕ್ಷಕಿ ವಿಜಯಾ ಗಿರೀಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net