ಪ್ರತಿದಿನ ಯೋಗ ಅಭ್ಯಾಸ ಮಾಡಿ

kavital Yoga
ಪಾಮನಕಲ್ಲೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಯೋಗ ಗುರು ಚಂದ್ರಶೇಖರ ಗುರೂಜಿ ವಿದ್ಯಾರ್ಥಿಗಳಿಗೆ ಯೋಗಾಭ್ಯಾಸ ಮಾಡಿಸಿದರು.
Published on

ಕವಿತಾಳ: ಭಾರತ ಯೋಗ ಮತ್ತು ಆಯುರ್ವೇದ ಪದ್ಧತಿಯನ್ನು ಜಗತ್ತಿಗೆ ಕೊಡುಗೆಯಾಗಿ ನೀಡಿದ್ದು, ಇವು ಆರೋಗ್ಯದ ಸಂಪತ್ತಾಗಿವೆ ಎಂದು ಯೋಗಗುರು ಚಂದ್ರಶೇಖರ ಮಟ್ಟೂರು ಹೇಳಿದರು.

ವಿಶ್ವ ಯೋಗ ದಿನಾಚರಣೆ ನಿಮಿತ್ತ ಪಾಮನಕಲ್ಲೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯುರ್ವೇದ ಆಸ್ಪತ್ರೆ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಯೋಗ ಶಿಬಿರದಲ್ಲಿ ಮಾತನಾಡಿದರು.

ಋಷಿಮುನಿಗಳು ಯೋಗ ಮತ್ತು ಆಯುರ್ವೇದ ಮಹತ್ವವನ್ನು ನಮಗೆ ತಿಳಿಸಿಕೊಟ್ಟರು. ನಿತ್ಯ ಯೋಗ ಮಾಡುವುದರಿಂದ ಪ್ರತಿಯೊಬ್ಬರೂ ಆರೋಗ್ಯವಾಗಿರಬಹುದು. ಮಾನಸಿಕ ಹಾಗೂ ದೈಹಿಕವಾಗಿ ಸದೃಢರಾಗಿರಲು ಸಾದ್ಯ. ಹೀಗಾಗಿ ಹಲವು ದೇಶಗಳಲ್ಲಿ ಜನರು ಯೋಗವನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ ಎಂದರು.

ಬಳಿಕ ವಿದ್ಯಾರ್ಥಿಗಳಿಗೆ ಯೋಗಾಭ್ಯಾಸ ಮಾಡಿಸಲಾಯಿತು. ರಂಗಭೂಮಿ ಕಲಾವಿದ ವಿಜಯಕುಮರ ಗುತ್ತೆದಾರ, ಆಯುರ್ವೇದ ಆಸ್ಪತ್ರೆ ಡಾ. ಶರಣಪ್ಪ, ಮುಖ್ಯಶಿಕ್ಷಕ ಬಸವರಾಜಪ್ಪ ಆರ್, ಶಿಕ್ಷಕರಾದ ಬಸನಗೌಡ ನಿಲೋಗಲ್, ನಾಗಪ್ಪ ಅಮೀನಗಡ, ಚಂದ್ರಪ್ಪ, ಬಸವರಾಜ ಕೆ, ಬಸವರಾಜ ಗಲಗಿನ, ಶರಣಬಸವ, ಶಿಕ್ಷಕಿ ಸುರೇಖಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net