ಸಕಾರಾತ್ಮಕ ಚಿಂತನೆ ರೂಢಿಸಿಕೊಳ್ಳಿ

Practice positive thinking.
ವಿಜಯಪುರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಫುಟ್ಬಾಲ್​ ಪಂದ್ಯದಲ್ಲಿ ವಿಜೇತ ತಂಡಕ್ಕೆ ಟ್ರೋಫಿ ವಿತರಿಸಲಾಯಿತು. ರಾಜಶೇಖರ ದೈವಾಡಿ, ಫಯಾಜ್​ ಕಲಾದಗಿ, ಕೈಲಾಸ್​ ಹಿರೇಮಠ ಮತ್ತಿತರರಿದ್ದಾರೆ.
Published on

ವಿಜಯಪುರ: ಜೀವನದಲ್ಲಿ ಬರುವ ಎಲ್ಲ ವಿಷಯಗಳನ್ನು ಸಕಾರಾತ್ಮವಾಗಿ ತೆಗೆದುಕೊಳ್ಳಬೇಕು ಎಂದು ಯುವ ಜನ ಸೇವಾ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರಾಜಶೇಖರ ದೈವಾಡಿ ಸಲಹೆ ನೀಡಿದರು.

ನಗರದ ಡಾ. ಬಿ.ಆರ್​. ಅಂಬೇಡ್ಕರ್​ ಜಿಲ್ಲಾ ಕ್ರೀಡಾಂಗಣದಲ್ಲಿ ಲಯನ್ಸ್​ ಫುಟ್ಬಾಲ್​ ಕ್ಲಬ್​ ವತಿಯಿಂದ ನಡೆದ 19 ಒಳಗಿನ ಬಾಲಕ ಬಾಲಕಿಯರ ಆಹ್ವಾನಿತ ಫುಟ್ಬಾಲ್​ ಪಂದ್ಯಾವಳಿಯ ಇತ್ತೀಚೆಗೆ ಹಮ್ಮಿಕೊಂಡಿದ್ದ ಬಹುಮಾನ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಅವರು, ಯುವಜನತೆ ಉತ್ತೀರ್ಣ&ಅನುತ್ತೀರ್ಣ ಎಂಬ ವಿಷಯವನ್ನು ಬದಿಗಿರಿಸಿ ಸುಂದರ ಭವಿಷ್ಯಕ್ಕೆ ನಾವೆಲ್ಲರೂ ಬೆರೆತುಕೊಳ್ಳಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕೈಲಾಸ್​ ಹಿರೇಮಠ ಮತ್ತು ಮುಖಂಡ ಫಯಾಜ ಕಲಾದಗಿ ಮಾತನಾಡಿದರು. ಹಿರಿಯ ಆಟಗಾರರಾದ ಸುರೇಶ ಜಮಖಂಡಿ, ಮಾನಿಕ ಗುಳಸ್ಕರ, ಸಂತೋಷ ರಾಠೋಡ, ದಾರಸಿಂಗ್​ ಪವಾರ್​ ಮತ್ತು ಕ್ಲಬ್​ ಕಾರ್ಯದರ್ಶಿ ವೈ.ಬಿ. ಜಂಪ್ಲೆ ವೇದಿಕೆಯಲ್ಲಿದ್ದರು.

ಲಯನ್ಸ್​ ಪುಟಬಾಲ್​ ಕ್ಲಬ್​ನ ಬಾಲಕ/ಬಾಲಕಿಯರು ಪ್ರಥಮ ಸ್ಥಾನಕ್ಕೆ ಆಯ್ಕೆಯಾದರು. ಕ್ರೀಡಾ ಪಟುಗಳಿಗೆ ಪ್ರಮಾಣಪತ್ರ, ಪದಕ ಹಾಗೂ ಟ್ರೋಫಿ ವಿತರಿಸಲಾಯಿತು.

ವಿನಾಯಕ ಸಿಂಗೆ, ಸತೀಶ ಶಾಪುರ, ಬಾಬು ಮೈಲಾರಿ, ಸೋಮೇಶ ಅಳಗುಂಡಗಿ, ಸಂತೋಷ ಕಬಾಡೆ, ಮನೋಜ ದೋಡ್ಡಮನಿ, ಪ್ರಜ್ವಲ್​ ಭೋಸಲೆ, ಆಕಾಶ ಕವಟಗಿ, ಮಾದೇವ ಕವಟಗಿ, ಹರೀಶ ಬೇವಿನಕಟ್ಟಿ, ಬಸು ಬಾಂಡೆಕರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net