ಮಿತ ಆಹಾರ, ಹಿತ ಮಾತು ರೂಢಿಸಿಕೊಳ್ಳಿ

Nw Malawad New Newsss
Published on

ಹುಬ್ಬಳ್ಳಿ : ಪ್ರತಿಯೊಬ್ಬರು ಮಿತವಾದ ಆಹಾರ ಪದ್ಧತಿ ಹಾಗೂ ಹಿತವಾದ ಮಾತುಗಳನ್ನು ಆಡುವುದನ್ನು ರೂಢಿಸಿಕೊಳ್ಳಬೇಕು ಎಂದು ಕೃಷಿ ಇಲಾಖೆ ನಿವೃತ್ತ ಅಧಿಕಾರಿ ಹನಮಂತರಾವ ಟಕ್ಕಳಕಿ ಹೇಳಿದರು.

ಇಲ್ಲಿನ ಲಿಂಗರಾಜ ನಗರದ ಸಾಂಸ್ಕೃತಿಕ ಸಮುದಾಯ ಭವನದಲ್ಲಿ ಉಣಕಲ್ ಪ್ರೋಬಸ್ ಕ್ಲಬ್​ನ ಮೇ ತಿಂಗಳದ ಮಾಸಿಕ ಸಭೆಯಲ್ಲಿ ‘ಸರಳ ಜೀವನಕ್ಕಾಗಿ ಮನೆ ಮದ್ದು’ ವಿಷಯ ಕುರಿತು ಅವರು ಉಪನ್ಯಾಸ ನೀಡಿದರು.

ಪ್ರತಿಯೊಬ್ಬರು ಯೋಗ, ಪ್ರಾಣಾಯಾಮ, ಧ್ಯಾನ ಮತ್ತು ನಡಿಗೆಗೆ ಸಮಯ ಮೀಸಲಿರಿಸಿಕೊಂಡು ಉತ್ತಮ ಆರೋಗ್ಯ ಹೊಂದಬೇಕು. ದೇಹದ ವಾತ, ಪಿತ್ತ, ಕಫಗಳನ್ನು ಹೋಗಲಾಡಿಸಿಲು ಮನೆ ಮದ್ದು ಹೇಗೆ ಉಪಯುಕ್ತವಾಗುತ್ತದೆ ಎಂಬುದನ್ನು ಉದಾಹರಣೆಗಳ ಸಹಿತ ವಿವರಿಸಿದರು. ಪರಿಪೂರ್ಣ ಆರೋಗ್ಯ ಹೊಂದಲು ಸರಳ ಮುದ್ರೆಗಳನ್ನು ದೈನಂದಿನ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ನಿವೃತ್ತ ಶಿಕ್ಷಕ ಎಸ್.ಎಸ್. ಕರಡಿ, ಅಕ್ಕಮಹಾದೇವಿ ಅವರು ಕುವೆಂಪು ಹಾಗೂ ಇತರ ಶರಣರ ಹಾಡುಗಳನ್ನು ಹಾಡಿದರು. ಶಿವಾನಂದ ನೀಲಗುಂದ, ಎಂ.ವಿ. ಕಡಗಾಂವಿ ಹಾಗೂ ಮತ್ತಿತರರು ಹನಮಂತರಾವ ಟಕ್ಕಳಕಿ ಅವರೊಂದಿಗೆ ಸಂವಾದ ಮಾಡಿದರು.

ಕ್ಲಬ್ ಅಧ್ಯಕ್ಷ ಪ್ರೊ. ಕೆ.ಎಸ್. ಕೌಜಲಗಿ ಅಧ್ಯಕ್ಷತೆ ವಹಿಸಿದ್ದರು, ಉಪಾಧ್ಯಕ್ಷ ಡಾ. ಬಿ.ಸಿ. ಕೋಟಿ ಸ್ವಾಗತಿಸಿ, ಅತಿಥಿಗಳನ್ನು ಪರಿಚಯಿಸಿದರು. ನಿವೃತ್ತ ಪ್ರಾಚಾರ್ಯ ಡಾ. ಎಂ.ಬಿ. ಸಜ್ಜನರ ನಿರೂಪಿಸಿದರು. ಕಾರ್ಯದರ್ಶಿ ಡಾ. ಬಿ.ಎಸ್. ಮಾಳವಾಡ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net