ಆಚಾರ, ವಿಚಾರ ವೈಜ್ಞಾನಿಕವಾಗಿ ಅಧ್ಯಯನ ಮಾಡಿ ನಂಬಿ

2manju11
ಬೆಳಗಾವಿ ನಗರದ ಮಹಾಂತ ಭವನದಲ್ಲಿ ಹಮ್ಮಿಕೊಂಡಿದ್ದ ಮಾಸಿಕ ಅನುಭಾವ ಗೋಷ್ಠಿಯಲ್ಲಿ ಎಸ್.ಆರ್.ಡೊಂಗರೆ ಮಾತನಾಡಿದರು. ಬಸವರಾಜ ರೊಟ್ಟಿ, ಶಿವಬಸವ ದೇವರು ಇತರರಿದ್ದರು.
Published on

ಬೆಳಗಾವಿ: ವಿಶ್ವಾಸ ವಿರಲಿ, ಅಂಧ ವಿಶ್ವಾಸ ಬೇಡ. ಶ್ರದ್ಧೆ ಇರಲಿ, ಅಂಧ ಶ್ರದ್ಧೆ ಬೇಡ. ನಾವು ಯಾವುದೇ ಧಾರ್ಮಿಕ ಆಚಾರ, ವಿಚಾರಗಳ ಕುರಿತು ಸೈದ್ಧಾಂತಿಕ ಮತ್ತು ವೈಜ್ಞಾನಿಕ ಅಧ್ಯಯನ ಮಾಡಿ ನಂಬಿ ಆಚರಿಸಬೇಕು ಎಂದು ನಿವೃತ್ತ ಶಿಕ್ಷಕ ಎಸ್.ಆರ್.ಡೊಂಗರೆ ಹೇಳಿದರು.

ಮಹಾಂತೇಶ ನಗರದ ಮಹಾಂತ ಭವನದಲ್ಲಿ ಈಚೆಗೆ ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದಿಂದ ಏರ್ಪಡಿಸಿದ್ದ ಮಾಸಿಕ ಅನುಭಾವ ಗೋಷ್ಠಿಯಲ್ಲಿ ಮೂಢ ನಂಬಿಕೆ ಮತ್ತು ಪವಾಡ ಬಯಲು ಎಂಬ ವಿಷಯವಾಗಿ ಉಪನ್ಯಾಸ ನೀಡಿದರು. ಜಾಗತಿಕ ಲಿಂಗಾಯತ ಮಹಾಸಭಾದ ಅಧ್ಯಕ್ಷ ಬಸವರಾಜ ರೊಟ್ಟಿ ಮಾತನಾಡಿ, ಇತ್ತೀಚಿಗೆ ವಚನ ಸಾಹಿತ್ಯ ಮತ್ತು ಶರಣ ಸಂಸ್ಕೃತಿಯ ಮೇಲೆ ಪಟ್ಟಭದ್ರ ಹಿತಾಸಕ್ತಿಗಳು ದಾಳಿ ಮಾಡುತ್ತಿದ್ದು, ಶರಣರ ಕುರಿತು ಇಲ್ಲ ಸಲ್ಲದ ತಪ್ಪು ಮಾಹಿತಿ ನೀಡಿ ಜನರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ ಎಂದರು.

ಶಿವಬಸವ ದೇವರು, ರೇಷ್ಮೆ ಇಲಾಖೆ ಅೀಕ್ಷಕಿ ಭಾಗ್ಯಶ್ರೀ ಬೆಣಚಿನಮರ್ಡಿ, ಶಕುಂತಲಾ ನರಸನ್ನವರ, ಶ್ರೀದೇವಿ ನರಗುಂದ, ಅಶೋಕ ಮಳಗಲಿ, ಚಂದ್ರಪ್ಪ ಬೂದಿಹಾಳ, ಎಸ್.ಜಿ. ಸಿದ್ನಾಳ, ಮುರಿಗೆಪ್ಪ ಬಾಳಿ, ಅರವಿಂದ ಪರುಶೆಟ್ಟಿ, ಮಹಾನಂದಾ ಪರುಶೆಟ್ಟಿ, ಸುಜಾತಾ ಮತ್ತಿಕಟ್ಟಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net